ಬೆಂಗಳೂರು: ಬೆಳ್ಳಂದೂರು-ಸರ್ಜಾಪುರ ಔಟ್ ರಿಂಗ್ ರಸ್ತೆಯು ನಿರಂತರ ಮಳೆಯ ಕಾರಣ ಸಂಪೂರ್ಣ ಜಲಾವೃತಗೊಂಡಿದೆ.
ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿವೆ. ದೇವರಸುಬ್ಬನಹಳ್ಳಿಯಿಂದ ಇಬ್ಬಲೂರು ಕಡೆಗೆ ತೆರಳುವ ಪ್ರಯಾಣಿಕರು ಪರ್ಯಾಯ ಮಾರ್ಗದಲ್ಲಿ ತೆರಳುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಜಲಾವೃತಗೊಂಡಿರುವ ಈ ರಸ್ತೆಯ ವಿಡಿಯೋವನ್ನು ಎಚ್‌ಎಸ್‌ಆರ್ ಲೇಔಟ್ ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
Kshetra Samachara
05/09/2022 09:39 am