ಹೊಸಕೋಟೆ: ಬೆಂಗಳೂರು ಗ್ರಾಮಾಂತರದಲ್ಲೂ ಮಳೆ ಆರ್ಭಟ ಮುಂದುವರೆದಿದೆ.ಸಂಜೆ ಸುರಿದ ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75 ಸಂಪೂರ್ಣವಾಗಿ ಜಲಾವೃತವಾಗಿದೆ.
ಹೊಸಕೋಟೆ ಮತ್ತು ಕೋಲಾರ ರಸ್ತೆಯ ಕೊಳತೂರು ಗೇಟ್ ಜಲಾವೃತವಾಗಿದ್ದು,ದ್ವಿಚಕ್ರ ವಾಹನ ಸವಾರರು ಮತ್ತು ಕಾರು ಚಾಲಕರು ನೀರಿನಲ್ಲಿ ಸಿಕ್ಕಿ ಪರದಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಎಕ್ಸ್ಪ್ರೆಸ್ ಹೈವೇ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸಂಪೂರ್ಣ ನೀರು ರಸ್ತೆಗೆ ಬಂದಿದೆ.ಸೂಕ್ತ ರೀತಿಯ ಕಾಲುವೆ ನಿರ್ಮಾಣ ಮಾಡದೆ ಇರುವುದರಿಂದ ರಸ್ತೆಯಲ್ಲಿ ನೀರು ತುಂಬುತ್ತಿದೆ.ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರನಿಗೆ ವಾಹನಸವಾರರು ಹಿಡಿ ಶಾಪ ಹಾಕುತ್ತಿದಾರೆ.
ಮಳೆ ಬಂದಾಗ ಪ್ರತಿ ಬಾರಿ ಹೆದ್ದಾರಿಯಲ್ಲಿ ನೀರು ಬರುತ್ತಿದ್ದು ಕಂಡು ಕಡದಂತೆ ಇರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನ ಜನರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.ಸಂಬಂಧಪಟ್ಟಂತಹ ಹಿರಿಯ ಅಧಿಕಾರಿಗಳು ಇದಕ್ಕೆ ಆದಷ್ಟು ಬೇಗ ಶಾಶ್ವತ ಪರಿಹಾರ ಕೊಡಿ ಅಂತ ಜನರು ಆಕ್ರೋಶ ಹೊರಹಾಕ್ತಿದ್ದಾರೆ.
ಗೀತಾಂಜಲಿ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
04/08/2022 08:59 pm