ಬೆಂಗಳೂರು: ಸತತವಾಗಿ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಜನ ಹೈರಾಣ ಆಗಿದ್ದಾರೆ. ಬೆಂಗಳೂರಿನ ಹಲವಾರು ಕಡೆ ರಸ್ತೆಗಳು ನೀರಿನಿಂದ ತುಂಬಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.
ಬೆಂಗಳೂರಿನ ರಸ್ತೆಗಳು ಅಕ್ಷರಶಹ ನದಿ ಯಂತಾಗಿದೆ. ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್ ರಸ್ತೆಗಳು ಸಂಪೂರ್ಣವಾಗಿ ನೀರಿನಿಂದ ತುಂಬಿ ಹೋಗಿದೆ ಮತ್ತು ಅನುಗ್ರಹ ಲೇಔಟಿನಲ್ಲಿ ಇದ್ದ ದೇವಸ್ಥಾನಕ್ಕೂ ಕೂಡ ನೀರು ನುಗ್ಗಿದೆ. ದ್ವಿಚಕ್ರ ವಾಹನಗಳಲ್ಲಿ ನೀರು ನುಗ್ಗಿ ಸವಾರರು ಗಾಡಿಗಳನ್ನು ತಳ್ಳಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.
ರಸ್ತೆಯ ಮೇಲೆ ಮೂರು ಅಡಿ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿಕೊಂದು ರಸ್ತೆ ಮೇಲೆ ಹೋಗುವ ದೃಶ್ಯ ಕಂಡು ಬಂತು.ಅನುಗ್ರಹ ಲೇಔಟ್ ನ ಬಹುತೇಕ ರಸ್ತೆಗಳು ಇಡೀ ರಾತ್ರಿ ಬಿಟ್ಟುಬಿಡದೆ ಸುರಿದ ಭಾರಿ ಮಳೆಗೆ ನೀರಿನಿಂದ ತುಂಬಿ ಹೋಗಿವೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
17/06/2022 10:04 am