ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಆಗಿರುವಂತಹ ಅನಾಹುತಗಳು ಒಂದೆರಡಲ್ಲ.ಬಿಟಿಎಂ ಲೇಔಟ್ ನ ಹಲವು ರಸ್ತೆಗಳು ಸಂಪೂರ್ಣವಾಗಿ ಕೆರೆಯಂತೆ ನೀರಿ ನಿಂದ ತುಂಬಿ ಹೋಗಿತ್ತು. ಮನೆಗಳ ಬಾಗಿಲು ಒಡೆದು ನೀರು ಮನೆಗಳ ಒಳಗೆ ನುಗ್ಗಿ ಬಂತು.ಇಡೀ ರಾತ್ರಿ ಏರಿಯಾದ ನಿವಾಸಿಗಳು ತಮ್ಮ ಮನೆಯಲ್ಲಿ ತುಂಬಿರುವಂತಹ ಮಳೆ ನೀರನ್ನು ಹೊರಹಾಕಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಬಿಟಿಎಂ ಲೇಔಟ್ ನ 39 ನೇ ಮುಖ್ಯರಸ್ತೆಯಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಇಡೀ ರಾತ್ರಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮಡಿವಾಳ ಕೆರೆ ಉಕ್ಕಿ ಹರಿಯುತ್ತಿರೋದೇ ಇದಕ್ಕೆ ಕಾರಣ. ಒಂದು ವಾರಗಳಿಂದ ಸತತವಾಗಿ ಬರುತ್ತಿರುವ ಭಾರಿ ಮಳೆಯಿಂದ ಮಡಿವಾಳ ಕೆರೆಯು ಈಗ ಸಂಪೂರ್ಣವಾಗಿ ಉಕ್ಕಿ ಹರಿಯುತ್ತಿದೆ. ಇದರಿಂದ ಮನೆಗಳು ಮತ್ತು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
18/05/2022 09:30 am