ಬೆಂಗಳೂರು : ನಮ್ಮ ಪೂರ್ವಜರು ಉಳಿಸಿಕೊಂಡು ಬಂದಂತಹ ಕೆರೆಗಳನ್ನು ಈಗ ಸರಕಾರ ನಿರ್ಲಕ್ಷ್ಯ ತೋರಿ ಕೆರೆಗಳನ್ನು ಹಾಳು ಮಾಡುತ್ತಿದೆ.
ಒಂದು ಕಾಲದಲ್ಲಿ ಈ ಕೆರೆ ಸುಂದರವಾಗಿತ್ತು ತನ್ನ ಮಡಿಲಿನಲ್ಲಿ ಹಲವಾರು ಪ್ರಾಣಿಪಕ್ಷಿಗಳಿಗೆ ಆಶ್ರಯ ನೀಡಿ ಜೋಪಾನವಾಗಿ ಕಾಪಾಡಿಕೊಂಡು ಬಂದಿತ್ತು. ಆದರೆ ಈಗ ಸರಕಾರದ ನಿರ್ಲಕ್ಷ್ಯ ದಿಂದ ಕೆರೆ ಹಾಳಾಗಿದೆ.
ಇದು ಬೊಮ್ಮನಹಳ್ಳಿಯ ಕೂಡ್ಲಿ ಗೇಟ್ ಗ್ರಾಮದಲ್ಲಿ ಇರುವಂತಹ ಚಿಕ್ಕ ಕುಡ್ಲು ಕೆರೆ. ಈ ಕೆರೆ ಈಗ ಸಂಪೂರ್ಣ ಕಸ ಮತ್ತು ಕೊಳಚೆ ನೀರಿನಿಂದ ತುಂಬಿ ಹೋಗಿದೆ.
ಸುಮಾರು 16 ಎಕರೆಯ ಈ ಕೆರೆ ಈಗ ಹಾಳಾಗಿ ಹೋಗಿದೆ. ಎಂಜಿಟಿ ಈ ಕೆರೆಯ ನೀರು ಸ್ಯಾಂಪಲ್ ಗಳನ್ನು ತೆಗೆದುಕೊಂಡು ಲ್ಯಾಬ್ ಟೆಸ್ಟ್ ಗೆ ಕಳಿಸಲಾಗಿತ್ತು ಟೆಸ್ಟ್ ವರದಿಯಲ್ಲಿ ಈ ಕೆರೆಯ ನೀರು ಯಾವುದೇ ಕಾರಣಕ್ಕೂ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಕುಡಿಯಲು ಯೋಗ್ಯವಲ್ಲ ಎಂದು ವರದಿ ಹೇಳಿದೆ.
Kshetra Samachara
06/05/2022 08:52 am