ಬೆಂಗಳೂರು: ಇತ್ತೀಚೆಗೆ ಪರಿಸರದ ಮೇಲೆ ಮಾನವನ ಗದಾ ಪ್ರಹಾರ ಹೆಚ್ಚಾಗುತ್ತಿದೆ. ಪ್ರತಿದಿನ ದೇಶಾದ್ಯಂತ 27 ಸಾವಿರ ಮರಗಳನ್ನು ಕಡಿಯಲಾಗುತ್ತದೆ ಎನ್ನುತ್ತೇ ದಾಖಲೆ. ಪ್ರತಿವರ್ಷ ಸಾವಿರಾರು ಹೆಕ್ಟೇರ್ ಕಾಡು ನಾಶವಾಗುತ್ತಿದೆ. ಪ್ರತಿದಿನ ಸಾವಿರಾರು ವಾಹನಗಳು ರಸ್ತೆಗಿಳಿದು ಇಂಗಾಲದ ಡೈಆಕ್ಸೈಡ್ ಹೊರಹಾಕ್ತಿವೆ. ಇನ್ನು ಕಾರ್ಖಾನೆಗಳು ಬಿಡುವ ಇಂಗಾಲದ ಗಾಳಿ ಜೋರಾಗಿಯೇ ಇದೆ. ಇಂದಿನ ಮೋಜು ಮಸ್ತಿಗಾಗಿ ಮನುಷ್ಯ ನಾಳೆಯ ಪರಿಸರವನ್ನು ನಾಶ ಮಾಡಿಕೊಳ್ಳುತ್ತಿದ್ದಾನೆ.
ಆದ್ದರಿಂದ ಪರಿಸರ ಉಳಿಸಿ. ಗಿಡಮರ ಬೆಳೆಸಿ ಎಂಬ ದ್ಯೇಯವಾಕ್ಯದೊಂದಿಗೆ ಯಲಹಂಕದ ನಾಗಾರ್ಜುನ ಪದವಿ ಪೂರ್ವ ಕಾಲೇಜಿನ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡ ಸಮೂಹ ನೃತ್ಯವನ್ನು ಏರ್ಪಡಿಸಿತ್ತು. ನೃತ್ಯ ರೂಪಕ, ಮ್ಯೂಸಿಕ್ ಬೀಟ್ಸ್ ಮತ್ತು ಕನ್ನಡ, ಹಿಂದಿ ಹಾಡುಗಳ ತುಣುಕುಗಳ ಸಂಯೋಜನೆ ಪರಿಸರ ಮತ್ತು ಕಾಡನ್ನು ಉಳಿಸಿ ಎಂಬ ಸಮೂಹ ಡ್ಯಾನ್ಸ್ ಚೆನ್ನಾಗಿತ್ತು. ಯಲಹಂಕ ಓಲ್ಡ್ ಟೌನ್, ಸಂತೆ ಸರ್ಕಲ್, ಸುರಭಿ ಲೇಔಟ್, ಯಲಹಂಕದ NES ಸರ್ಕಲ್ ಮತ್ತು ಯಲಹಂಕ ಉಪನಗರಗಳಲ್ಲಿ ನೃತ್ಯರೂಪಕವನ್ನು ಕಾಲೇಜ್ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಇದೇ ವೇಳೆ ಶಿಕ್ಷಕರು ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಬೇಕೆಂದರು.
ಪರಿಸರ ಇದ್ದರೆ ನಾವು ನೀವು ಎಲ್ಲ. ಅರಣ್ಯ ಕಾಡು, ಗಿಡಮರ ಉಳಿದ ಜೀವಸಂಕಲದ ಉಳಿವು. ಎಲ್ಲರೂ ಜಾಗೃತರಾಗಿ ಪರಿಸರ ಉಳಿಸಿ.
ಸುರೇಶ್ ಬಾಬು Public Next ಯಲಹಂಕ.
PublicNext
30/05/2022 08:13 pm