ಬೆಂಗಳೂರು: ಸಿಲಿಕಾನ್ ಸಿಟಿ ಅಂದ್ರೆ ಮೊದಲು ಕಣ್ ಮುಂದೆ ಬರೋದೆ ಟ್ರಾಫಿಕ್. ಪೀಕ್ ಅವರ್ ನಲ್ಲಂತೂ ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡವರಿಗಷ್ಟೇ ಅದ್ರ ಅನುಭವ ಗೊತ್ತು. ಸದ್ಯ ಈ ಟ್ರಾಫಿಕ್ ಜಂಜಾಟಕ್ಕೆ ಬ್ರೇಕ್ ಹಾಕಲು ನಗರ ಸಂಚಾರ ಪೊಲೀಸ್ರು ಗೂಗಲ್ ಮೊರೆ ಹೋಗಿದ್ದಾರೆ.
ನಗರದ ರಸ್ತೆಗಳ ಸಂಚಾರ ದಟ್ಟಣೆ ಬಗ್ಗೆ ಗೂಗಲ್‌ನಿಂದ ಸಂಚಾರ ಹಿರಿಯ ಪೊಲೀಸರು ಅಧ್ಯಯನ ನಡೆಸಿದ್ದಾರೆ. ಗೂಗಲ್ ಡೇಟಾ ಅನಲಿಸಿಸ್ ಮಾಡಿ ಕತ್ತರಿಗುಪ್ಪೆ ಜಂಕ್ಷನ್ ಸಿಗ್ನಲ್ ಪ್ರಾಯೋಗಿಕವಾಗಿ ಅಧ್ಯಯನ ನಡೆಸಿದ್ದಾರೆ. ಒಂದು ನಿಮಿಷಕ್ಕೆ ಎಷ್ಟು ವಾಹನ ಸಂಚಾರ ಆಗುತ್ತೆ? ಸಿಗ್ನಲ್‌ನಲ್ಲಿ ಕನಿಷ್ಠ ಹಾಗೂ ಗರಿಷ್ಠ ಎಷ್ಟು ಸಮಯ ವಾಹನ ನಿಲ್ಲುತ್ತವೆ? ಎಂದು ಪೊಲೀಸರಿಗೆ ಗೂಗಲ್ ವರದಿ ನೀಡಿದೆ. ಗೂಗಲ್ ಅಧ್ಯಯನದಂತೆ ಟ್ರಾಫಿಕ್ ಸಿಗ್ನಲ್ ಸಮಯ ನಿಗದಿ ಮಾಡಿದ್ದಾರೆ. ಗೂಗಲ್ ಸ್ಟಡಿಯಂತೆ ಪ್ರಾಯೋಗಿಕವಾಗಿ ಕತ್ತರಿಗುಪ್ಪೆ ಸಿಗ್ನಲ್‌ನಲ್ಲಿ ಟೈಮ್ ಸೆಟ್ ಮಾಡಿ ಸಿಗ್ನಲ್ ವ್ಯವಸ್ಥೆ ಜಾರಿ ಮಾಡಿದ್ದಾರೆ.
ಕತ್ತರಿಗುಪ್ಪೆ ಜಂಕ್ಷನ್ ಸಂಪರ್ಕಿಸುವ ನಾಲ್ಕು ರಸ್ತೆಗಳ ಸಿಗ್ನಲ್ ಸ್ಟಡಿ ಮಾಡಿದ ಗೂಗಲ್. ನಾಲ್ಕು ರಸ್ತೆಯಲ್ಲಿ ಯಾವ ಸಮಯದಲ್ಲಿ ಎಷ್ಟು ವಾಹನ ದಟ್ಟಣೆ ಇರುತ್ತೆ. ಯಾವ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಇರುತ್ತೆ. ಬೆಳಗಿನ ಪೀಕ್ ಅವಧಿಯಲ್ಲಿ ಎಷ್ಟು, ಮಧ್ಯಾಹ್ನ ಎಷ್ಟು, ಸಂಜೆ ಎಷ್ಟು ಹಾಗೂ ರಾತ್ರಿ ವೇಳೆ ಎಷ್ಟು ದಟ್ಟಣೆ ಇರುತ್ತೆ. ಯಾವ ರಸ್ತೆಗೆ ಯಾವ ಸಮಯದಲ್ಲಿ ಎಷ್ಟು ಸೆಕೆಂಡ್ ಕಾಲಾವಧಿ ನೀಡಬೇಕು ಎಂದು ಅಧ್ಯಯನ ನಡೆಸಿದೆ.
ಗೂಗಲ್ ಅಧ್ಯಯನದಂತೆ ಟೈಮರ್ ಸೆಕೆಂಡ್ ಸೆಟ್ ಮಾಡಿದ್ದ ಟ್ರಾಫಿಕ್ ಪೊಲೀಸರು. ಉಪಗ್ರಹದ ನೆರವಿನಿಂದ ವೈಜ್ಞಾನಿಕವಾಗಿ ಸಿಗ್ನಲ್ ಅಳವಡಿಸಿದ್ದ ಟ್ರಾಫಿಕ್ ಪೊಲೀಸರ ಪ್ರಾಯೋಗಿಕ ಯೋಜನೆ ಸಕ್ಸಸ್ ಆಗಿದೆ. ಹೊಸ ಟೈಮಿಂಗ್ ನಿಂದ ಕತ್ತರಿಗುಪ್ಪೆ ಸಿಗ್ನಲ್‌ನಲ್ಲಿ ವಾಹನ ದಟ್ಟಣೆ ಇಳಿಕೆಯಾಗಿದ್ದು ಟ್ರಾಫಿಕ್ ಪೊಲೀಸರಲ್ಲಿ ಮೂಡಿದ ಮಂದಹಾಸ ಮೂಡಿಸಿದೆ. ಕತ್ತರಿಗುಪ್ಪೆ ಸಿಗ್ನಲ್ ನಂತೆ ನಗರದ ಇತರೆಡೆ ಜಾರಿಗೆ ಪೊಲೀಸರ ಒಲವು ತೋರಿದ್ದು ಈ ಬಗ್ಗೆ ಅಧ್ಯಯನ ನಡೆಸಿ ಜಾರಿಗೆ ತರಲು ಚಿಂತನೆ ನಡೆಸಿದ್ದು, ಪ್ರಾಯೋಗಿಕವಾಗಿ ಸಾರಕ್ಕಿ ಸಿಗ್ನಲ್, ಸಿಲ್ಕ್ ಬೋರ್ಡ್ ಸೇರಿದಂತೆ ಮತ್ತಷ್ಟು ಸಿಗ್ನಲ್‌ಗಳು ಗುರುತು ಮಾಡಿದ್ದು ಮುಂದಿನ ದಿನದಲ್ಲಿ ಬೆಂಗಳೂರಿನ ಎಲ್ಲಾ ಸಿಗ್ನಲ್ ಮಾನಿಟೈಸರ್ ಮಾಡಿ ಸಿಗ್ನಲ್ ಅಳವಡಿಸುವುದಾಗಿ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಕುಲ್ ದೀಪ್ ಕುಮಾರ್ ಜೈನ್ ಪಬ್ಲಿಕ್ ನೆಕ್ಸ್ಟ್‌ಗೆ ಮಾಹಿತಿ ನೀಡಿದ್ದಾರೆ.
Kshetra Samachara
04/08/2022 07:09 pm