ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ನಂ. 198 ರ ಸಮಸ್ಯೆಗಳ ಬಗ್ಗೆ ಇಂದು ಸಮಗ್ರವಾಗಿ ಚರ್ಚಿಸಲಾಯಿತು..BWSSB ಕಮಿಷನರ್, ಬಿಬಿಎಂಪಿ ಜಾಯಿಂಟ್ ಕಮಿಷನರ್ , ಬಿಡಿಎ ಕಮಿಷನರ್ ,ಮಾಲಿನ್ಯ ಮಂಡಳಿ ಘಟಕದ ಕಮಿಷನರ್, ಘನತ್ಯಾಜ್ಯ ನಿರ್ವಹಣಾ ಘಟಕದಿಂದ ಅಧಿಕಾರಿಗಳು ಬಂದು ಸಾರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿದ್ರು.
ಹೆಮ್ಮಿಗೆಪುರ ವಾರ್ಡ್ ನಲ್ಲಿ ಈಗ ತಾನೇ ಬಿಬಿಎಂಪಿಗೆ ಸೇರ್ಪಡೆಯಾಗಿರುವ ಹಲವಾರು ಊರುಗಳು ಬರುತ್ತವೆ. ಅದ್ರಲ್ಲಿ ತಲಘಟ್ಟಪುರವೂ ಒಂದು. ಇಲ್ಲಿ ಹಲವಾರು ಸಮಸ್ಯೆಗಳು ಇದೆ.. ಒಂದೊಂದಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ರು..
ಇನ್ನೂ ಬನಶಂಕರಿ 6 ನೇ ಹಂತದ 4 ನೇ ಬ್ಲಾಕ್ ನಲ್ಲಿರುವ ಬಿಡಿಎ ಅಪಾರ್ಟ್ ಮೆಂಟ್ ಗಳಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಿದೆ. ಈ ವಿಚಾರವಾಗಿ ಸಭೆಯಲ್ಲಿ ಅಧಿಕಾರಿಗಳ ಮೇಲೆ ಜನ ತಿರುಗಿ ಬಿದ್ದಿದ್ರು. ಇದಕ್ಕೆ ಉತ್ತರಿಸಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಇದರ ಬಗ್ಗೆ ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿದ್ದೇನೆ. ನನಗೆ ಮೂರ್ನಾಲ್ಕು ದಿನ ಟೈಂ ಕೊಡಿ ನಾನು ಇದನ್ನೆಲ್ಲ ಸರಿಪಡಿಸುತ್ತೇನೆಂದು ಆಶ್ವಾಸನೆ ಕೊಟ್ಟಿದ್ದಾರೆ.
ರಂಜಿತಾಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
26/07/2022 08:37 pm