ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಝಾನ್ ವರ್ಸಸ್ ಹನುಮಾನ್ ಚಾಲೀಸಾ ವಿವಾದ: ಮುಸ್ಲಿಂ ಧರ್ಮಗುರು ಹೇಳಿದ್ದೇನು ?

ಬೆಂಗಳೂರು: ಹಿಜಾಬ್‌ನಿಂದ ಶುರುವಾದ ವಿವಾದ ಇದೀಗ ಮುಸ್ಲಿಮರ ಅಝಾನ್‌ಗೆ ಬಂದು ನಿಂತಿದೆ. ಅಝಾನ್ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಹಿಂದೂ ಪರ ಮುಖಂಡರು ಒತ್ತಾಯಿಸುತ್ತಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಮುಸ್ಲಿಂ ಮುಖಂಡರು ಅಝಾನ್‌ಗೆ ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ. ಇದರ ನಡುವೆ ಅಝಾನ್ V/s ಸುಪ್ರಭಾತ ಅಭಿಯಾನ ಹನುಮಾನ್ ಚಾಲೀಸಾ ಜೋರಾಗಿದೆ.

ಈಗಾಗಲೇ ಹಿಂದೂ ಪರ ಮುಖಂಡರು ಅಝಾನ್ ಕೂಗುವ ಧ್ವನಿವರ್ಧಕಕ್ಕೆ ಅವಕಾಶ ಕೊಡಬಾರದು. "ಅಝಾನ್ ಧ್ವನಿವರ್ಧಕ ತೆರವಿಗೆ ಕೊಟ್ಟಿದ್ದ ಗಡುವು ಮುಗಿದಿದೆ. ಹೀಗಾಗಿ ಓಂ ಕಾರದ ಮೂಲಕ ಹನುಮಾನ್ ಚಾಲೀಸಾ ಮೊಳಗಿಸಿದ್ದೇವೆ. ನಮ್ಮ ದೇವಾಲಯದಲ್ಲಿ ಭಕ್ತಿಗೀತೆ, ಭಜನೆಗೆ ಸ್ವಾತಂತ್ರ್ಯವಿಲ್ಲವೇ, ನಾವು ಯಾವ ದೇಶದಲ್ಲಿದ್ದೇವೆ. ಬೆಂಗಳೂರಿನಲ್ಲಿ ನಮ್ಮ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದನ್ನು ಖಂಡಿಸುತ್ತೇನೆ'' ಎಂದು ಮೈಸೂರಿನಲ್ಲಿ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಮುಸ್ಲಿಂ ಧರ್ಮಗುರಗಳು "ಸುಪ್ರೀಂ ಕೋರ್ಟ್ ಈಗಾಗಲೇ ಮಸೀದಿ, ಮಂದಿರ, ಚರ್ಚ್, ಗುರುದ್ವಾರಕ್ಕೆ ಸೇರಿ ಒಂದು ಆದೇಶ ನೀಡಿದೆ. ಡಿಬಿಎಸ್ ನಿಯಂತ್ರಣ ಮಾಡಿಕೊಂಡು ಮೈಕ್ ಬಳಸಿಕೊಳ್ಳಲು ಅವಕಾಶವಿದೆ. ಈಗಾಗಲೇ ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಮಾಹಿತಿ ಕಲೆಹಾಕಿದೆ.

ನಾವು ಧ್ವನಿ ನಿಯಂತ್ರಣ ಮಾಡುವ ಡಿವೈಸ್ ಅಳವಡಿಸಿದ್ದೇವೆ. ಅದನ್ನು ಡಿಜಿಪಿಗೆ ಡೆಮೋ ಮಾಡಿ ತೋರಿಸಿದ್ದೇವೆ. ಬೆಂಗಳೂರಿನಲ್ಲಿ ಮೊದಲು ಹೈರೆಜ್ ಬಿಲ್ಡಿಂಗ್ ಇರಲಿಲ್ಲ. ಅವಾಗ ಅಷ್ಟೊಂದು ತೊಂದರೆ ಆಗಿರಲಿಲ್ಲ.‌ ಯಾರು ಹೈರೇಜ್ ಬಿಲ್ಡಿಂಗ್ ನಲ್ಲಿ ಇದ್ದಾರೆ ಅವರಿಗೆ ಜಾಸ್ತಿ ತೊಂದರೆ ಆಗ್ತಿದೆ ನಮ್ಮ ಧರ್ಮದಲ್ಲಿ ಯಾರಿಗೆ ತೊಂದರೆ ಕೊಡುವ ಅವಕಾಶವಿಲ್ಲ. ಅದಕ್ಕೆ ನಾವೇ ಮುಂದೆ ಬಂದು ಡಿವೈಸ್ ರೆಡಿ ಮಾಡಿದ್ದೇವೆ'' ಎಂದರು.

Edited By :
PublicNext

PublicNext

09/05/2022 06:47 pm

Cinque Terre

28.89 K

Cinque Terre

5

ಸಂಬಂಧಿತ ಸುದ್ದಿ