ವರದಿ: ಗೀತಾಂಜಲಿ
ಬೆಂಗಳೂರು:ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಸಿ ಜನರಲ್ ಆಸ್ಪತ್ರೆಯೂ ಒಂದು.ಆದ್ರೆ ಇಲ್ಲಿ ಸ್ವಚ್ಛತೆ ಅನ್ನುವುದು ಮರೀಚಿಕೆ.ನೂರಾರು ಜನರು ಓಡಾಡುವ ಆಸ್ಪತ್ರೆಯ ಆವರಣದಲ್ಲಿ ಶುಚಿತ್ವ ಇಲ್ಲ. ಜನ ಅಲ್ಲಲ್ಲೇ ಉಗುಳುತ್ತಾರೆ. ಜನರು ಕೈ ತೊಳ್ಳೆಯುವುದಕ್ಕೆ ಅಂತಾ ನಲ್ಲಿ ಮಾಡಿದ್ರೆ ಅಲ್ಲೇ ಗಲೀಜು ಮಾಡ್ತಿದಾರೆ.
ಕೆಲ ಜನರು ಆಸ್ಪತ್ರೆಯ ಸ್ವಚ್ಛತೆಯನ್ನ ಹಾಳುಮಾಡುತ್ತಿದ್ದಾರೆ. ಕೈ ತೊಳೆಯಲು ಮಾಡಿರುವ ನಲ್ಲಿಯಲ್ಲಿ ಶೇವಿಂಗ್ ಮಾಡುವುದು.ಮುಖ ತೊಳೆಯುವುದು ಹೀಗೆ ಜನರು ಉಪಯೋಗಿಸಲಾಗದಂತೆ ಗಲೀಜು ಮಾಡ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಸಾರ್ವಜನಿಕರ ಸ್ವತ್ತು. ಸ್ವಚ್ಛತೆಯನ್ನ ಕಾಪಾಡಬೇಕಾದ ಜನರೇ ಆಸ್ಪತ್ರೆಯ ಆವರಣದಲ್ಲಿ ಗಲೀಜು ಮಾಡ್ತಿದ್ದಾರೆ.
PublicNext
15/07/2022 04:47 pm