ಬೆಂಗಳೂರು: ಯಲಹಂಕ ಬಿಬಿಎಂಪಿ ವಲಯ ಬ್ಯಾಟರಾಯನಪುರ ವ್ಯಾಪ್ತಿ ಕುವೆಂಪುನಗರದ ಅಬ್ಬಗೆರೆ ಕೆರೆ ಹಿನ್ನೀರು ಪ್ರದೇಶದಲ್ಲಿ ಒತ್ತುವರಿಯಾಗಿದೆ. ಸಿಂಗಾಪುರ ಕೆರೆ ತೂಬುಕಾಲುವೆಯ 7 ಅಡಿ ಜಾಗವನ್ನು ಒತ್ತುವರಿ ಮಾಡಿ ಮಾಜಿ ಕಾರ್ಪೊರೇಟರ್ ಪತಿ ಶ್ರೀನಿವಾಸ್ ರವರು ಲ್ಯಾಂಡ್ಮಾರ್ಕ್ ಅಪಾರ್ಟ್ಮೆಂಟ್ ನಿರ್ಮಿಸಿದ್ದಾರೆ.
ಬಿಬಿಎಂಪಿ ಒತ್ತುವರಿ ತೆರವು ವೇಳೆ ಕುವೆಂಪುನಗರದ ಮಾಜಿ ಕಾರ್ಪೋರೇಟರ್ ನಂದಿನಿ ಪತಿ ಶ್ರೀನಿವಾಸ್ ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಅವಾಜ್ ಹಾಕಿ ವಿದ್ಯುತ್ ಸಂಪರ್ಕಕ್ಕೆ ಯಾವುದೆ ಧಕ್ಕೆ ಆಗಬಾರ್ದು ಎಂದಿದ್ದರು. ಇದೀಗ 240 ಮೀಟರ್ ಉದ್ದ 7 ಅಡಿ ಜಾಗ ಒತ್ತುವರಿ ಮಾಡಿದ್ದು, ತೆರವು ಕಾರ್ಯಾಚರಣೆ ಮುಂದುವರೆದಿದೆ. ಈ ಎಲ್ಲಾ ವಿಷಯ ಕುರಿತು ಅಪಾರ್ಟ್ಮೆಂಟ್ ಮಾಲೀಕ, ಮಾಜಿ ಕಾರ್ಪೊರೇಟರ್ ಪತಿ ಶ್ರೀನಿವಾಸ್ ಜೊತೆ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಚಿಟ್ -ಚಾಟ್ ನಿಮಗಾಗಿ.
PublicNext
15/09/2022 05:30 pm