ಬೆಂಗಳೂರು - ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣದ ಕೊಡುಗೆಯನ್ನು ಬಿಎಂಟಿಸಿ ಒದಗಿಸಿತ್ತು. ಪ್ರಯಾಣದ ಕೊಡುಗೆ ಬಳಸಿಕೊಂಡ ಪ್ರಯಾಣಿಕರು ಅಪಾರ ಸಂಖ್ಯೆಯಲ್ಲಿ ಪ್ರಯಾಣ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಕೊಡುಗೆಯಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮವು ಪ್ರಯಾಣಿಕರಿಗೆ ತನ್ನ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ದೊರೆತ್ತಿದ್ದು, ಬರೋಬ್ಬರಿ 61,47,323 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ.
ಈ ಮೂಲಕ ಸಾಕಷ್ಟು ಬಸ್‌ಗಳ ಕೊರತೆ ಇರುವುದು ಮುಖ್ಯವಾಗಿ ಗಮನಕ್ಕೆ ಬಂದಿದೆ. ಪ್ರಮುಖ ಬಸ್ ನಿಲ್ದಾಣ ಪ್ರದೇಶಗಳಾದ ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆ, ಕೆ.ಆರ್ ಮಾರುಕಟ್ಟೆಯಲ್ಲಿ ನೂರಾರು ಮಂದಿ ಬಸ್‌ಗಳಿಗಾಗಿ ಕಾದು ನಿಂತಿದ್ದರು.
ಕೆ.ಆರ್. ಮಾರುಕಟ್ಟೆಯಲ್ಲಿ ತಾಳ್ಮೆ ಕಳೆದುಕೊಂಡ ಜನಸಮೂಹ ಆಟೋ ರಿಕ್ಷಾಗಳನ್ನು ಹುಡುಕಲು ಯತ್ನಿಸಿದ್ದರಿಂದ ಹಲವು ಮಾರ್ಗಗಳಿಗೆ ಬಸ್‌ಗಳು ಸಮರ್ಪಕವಾಗಿ ದೊರಕಲಿಲ್ಲ ಎಂಬ ಮಾತು ಜನರಲ್ಲಿ ಕೇಳಿ ಬಂದಿತು.
ಸೋಮವಾರದಂದು ಪ್ರಯಾಣಿಕರ ಸಂಖ್ಯೆ 61,47,323 ಲಕ್ಷ ದಾಟಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
PublicNext
18/08/2022 10:38 pm