ಬೆಂಗಳೂರು: ಟಿನ್ ಫ್ಯಾಕ್ಟರಿ ಈಗ ಹೈಟೆಕ್ ಆಗಿ ಅಭಿವೃದ್ಧಿಯಾಗುತ್ತಿದೆ. ಒಂದು ಕಡೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದರೆ ಮತ್ತೊಂದು ಕಡೆ ರಸ್ತೆಯನ್ನ ಅಗಲಿಕಾರಣ ಮಾಡುತ್ತಿದ್ದಾರೆ. ಈ ಎಲ್ಲ ಕಾಮಗಾರಿ ಸುಮಾರು 1 ವರ್ಷದಿಂದ ನಡೆಯುತ್ತಿದೆ. ಆದರೂ ಕುಂಟುತ್ತಾ ಕಾಮಗಾರಿ ಸಾಗುತ್ತಿದೆ. ಈ ಕಾಮಗಾರಿ ಮುಗಿಯದೇ ಇದೀಗ ಜನರಿಗೆ ಸಂಕಷ್ಟ ಶುರುವಾಗಿದೆ.
ಹೌದು. ರಸ್ತೆಯಲ್ಲಿ ಜನರಿಗೆ ಹೋಗಲು ದಾರಿಯೇ ಇಲ್ಲ. ಇರುವ ಫುಟ್ಪಾತ್ ಮೇಲೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ ಜನರು ವಾಹನಗಳ ಮಧ್ಯದಲ್ಲೇ ಓಡಾಡುತ್ತಾರೆ. ಅಷ್ಟರ ಮಟ್ಟಿಗೆ ಇಲ್ಲಿ ಜನರಿಗೆ ಸಂಚಾರ ಫಜೀತಿ ತಂದಿದೆ.
ಟಿನ್ ಫ್ಯಾಕ್ಟರಿ, ನಾರಾಯಣಪುರ ಹೋಗಬೇಕಾದ್ರೆ ಈ ಹಿಂದೆ ಜನರು ಹೋಗುವುದಕ್ಕೆ ಫುಟ್ಪಾತ್ ಇತ್ತು. ಈಗ ಫುಟ್ಪಾತ್ ಇಲ್ಲ ಜನ ಓಡಾಡಲು ಫುಟ್ಪಾತ್ ಇಲ್ಲದೇ ನಿತ್ಯ ಯಾವಾಗ ಮೆಟ್ರೋ ಕಾಮಗಾರಿ ಮುಗಿಯುತ್ತೋ ಅಂತಿದ್ದಾರೆ.
ಕಿರಿದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಜನ ಆತಂಕಪಾಡುತ್ತಿದ್ದಾರೆ. ಸಂಜೆ ಆದ್ರೆ ಸಾಕು ಟ್ರಾಫಿಕ್ ಜಾಮ್ ಸಂಭವಿಸುತ್ತದೆ. ಜನರಿಗೆ ಆಗ ಸೈಡ್‌ನಲ್ಲಿ ಹೋಗುವುದಕ್ಕೂ ಜಾಗ ಇರಲ್ಲ. ಈ ಮೆಟ್ರೋ ಕಾಮಗಾರಿಯಿಂದ ಜನರಿಗೆ ಕಿರಿಕಿರಿಯಾಗಿದ್ದು, ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ.
ವರದಿ : ಗೀತಾಂಜಲಿ
PublicNext
27/07/2022 10:40 pm