ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ
ಬೆಂಗಳೂರು: ಖಾಸಗಿ ಮೊಬೈಲ್ ನೆಟ್ ವರ್ಕ್ ಕಂಪನಿಗಳು ರಸ್ತೆಗಳನ್ನು ಹಾಳು ಮಾಡಿದ ಬಗ್ಗೆ "ಪಬ್ಲಿಕ್ ನೆಕ್ಸ್ಟ್" ನಿನ್ನೆಯಷ್ಟೇ ವರದಿ ಮಾಡಿತ್ತು. ರಸ್ತೆಯ ದಿಕ್ಕು- ದಿಕ್ಕುಗಳಲ್ಲಿಯೂ ಅಗೆದು ಕೇಬಲ್ ಅಳವಡಿಸಲಾಗಿತ್ತು. ಅದರಲ್ಲೂ ಈ ರಸ್ತೆಗಳ ಮೇಲೆ ಹಾಕಿದ್ದ ಸ್ಲ್ಯಾಬ್ ಗಳನ್ನು ಬೇಕಾಬಿಟ್ಟಿಯಾಗಿ ಮುಚ್ಚಲಾಗಿತ್ತು. ಇದರಿಂದಾಗಿ ಸಂಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.
ಇದೀಗ ʼಪಬ್ಲಿಕ್ ನೆಕ್ಸ್ಟ್ʼ ವರದಿಗೆ ಸ್ಪಂದಿಸಿದ ಬಿಬಿಎಂಪಿ ವಾರ್ಡ್ ನಂಬರ್ 176ರ ಅಧಿಕಾರಿಗಳು, ರಸ್ತೆ ಮೇಲೆ ಬಾಯ್ದೆರೆದು ಬಲಿಗಾಗಿ ಕಾದು ಕುಳಿತಿದ್ದ ಸ್ಲ್ಯಾಬ್ ಗಳನ್ನೆಲ್ಲ ಸಮರ್ಪಕವಾಗಿ ಮುಚ್ಚಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
-ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
29/05/2022 10:00 am