ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಾರ್ಡ್ ಮರು ವಿಂಗಡಣೆ: ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ವರದಿ ಸಲ್ಲಿಕೆ

ಬೆಂಗಳೂರು: ಬಿಬಿಎಂಪಿ ವಾರ್ಡ್ಗಳ ಪುನರ್ ವಿಂಗಡಣೆ ಸಮಿತಿಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.

ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ರವರು ಮಾಹಿತಿ ನೀಡಿದರು.ಕಳೆದ ಶನಿವಾರ ಬಿಬಿ ಎಂಪಿ ಮುಖ್ಯ ಆಯುಕ್ತರಿಗೆ ತಕ್ಷಣವೇ ಕಳುಹಿಸುವಂತೆ ನಗರಾಭಿವೃದ್ಧಿ ಇಲಾಖೆಯು ಸೂಚಿಸಿತ್ತು.

ಸುಪ್ರೀಂ ಕೋರ್ಟ್ನ ಆದೇಶದಂತೆ ಅಗತ್ಯ ಕ್ರಮಕೈಗೊಳ್ಳಲು ಈ ವರದಿ ಸಲ್ಲಿಸಬೇಕು ಎಂದು ಪುನರ್ವಿಂಗಡಣಾ ಸಮಿತಿ ಅಧ್ಯಕ್ಷ್ಯರಾಗಿರುವ ಮುಖ್ಯ ಆಯುಕ್ತರಿಗೆ ತಿಳಿಸಿತ್ತು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಈ ಬಗ್ಗೆ ಅವರು ಶನಿವಾರ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಸರ್ಕಾರಕ್ಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮಗ್ರ ವರದಿ ಸಲ್ಲಿಕೆ ಮಾಡಿದ್ದಾರೆ ಎಂದು ರಂಗಪ್ಪ ತಿಳಿಸಿದರು.

2020ರ ಜನವರಿಯಲ್ಲಿ ಜಾರಿ ಗೊಳಿಸಲಾದ ಬಿಬಿಎಂಪಿ ಹೊಸ ಕಾಯ್ದೆ ಅನ್ವಯ ಈಗಿರುವ 198 ವಾರ್ಡ್ಗಳನ್ನು 243ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಈ ಕಾರ್ಯಕ್ಕೆ ರಚಿಸಿದ್ದ ಪುನರ್ ವಿಂಗಡಣಾ ಸಮಿತಿ ಒಂದೂವರೆ ವರ್ಷದಲ್ಲಿ ಮೂರು ಬಾರಿ ವಿಸ್ತರಣೆ ಕೋರಿತ್ತು.

‘ವಾರ್ಡ್ಗಳ ಪುನರ್ ವಿಂಗಡಣೆಗಾಗಿ ರಚಿಸಿದ್ದ ಸಮಿತಿಗೆ ಆರು ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿತ್ತು. ಈ ಸಮಿತಿಯ ಅವಧಿಯನ್ನು 2021ರ ಜುಲೈ 28ರಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಗೆ ಮುಂದುವರಿಸಿ ಆದೇಶಿಸಲಾಗಿತ್ತು. ಈ ಅವಧಿಯು 2022ರ ಜನವರಿ 28ಕ್ಕೆ ಮುಕ್ತಾಯವಾಗಿದೆ. ಆದರೆ, ಸಮಿತಿಯು ಇದುವರೆಗೂ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ’ ಎಂದು ಉಲ್ಲೇಖಿಸಲಾಗಿದೆ.

Edited By :
Kshetra Samachara

Kshetra Samachara

23/05/2022 09:58 pm

Cinque Terre

3.4 K

Cinque Terre

0

ಸಂಬಂಧಿತ ಸುದ್ದಿ