ರಾಜ್ಯದ ರಾಜಧಾನಿಯಲ್ಲೇ ಅತಿ ಹೆಚ್ಚು ಆಕ್ಸಿಜನ್ ಸೃಷ್ಟಿಸುವಂತಹ ಪಾರ್ಕ್ ಹೊಂದಿರುವ, ಸುಸಜ್ಜಿತ ರಸ್ತೆ, ಮೂಲ ಸೌಕರ್ಯ ಹೊಂದಿರುವ ವಾರ್ಡ್ ಅಂದ್ರೆ ಅದು ನಾಗಪುರ ವಾರ್ಡ್. ಜನಪ್ರತಿನಿಧಿಗಳಿಲ್ಲದ ಅವಧಿಯಲ್ಲಿ ವಾರ್ಡಾವಲೋಕನ ಇಲ್ಲಿದೆ.
ವಾರ್ಡ್ 67 ನಾಗಪುರ ವಾರ್ಡ್. ಈ ವಾರ್ಡ್‌ನಲ್ಲಿ ಗೆದ್ದಂತಹ ಕಾರ್ಪೊರೇಟರ್ ತಮ್ಮ ಅವಧಿಯಲ್ಲಿ ಉಪ ಮಹಾಪೌರರಾಗಿ ಆಯ್ಕೆಯಾಗುತ್ತಾರೆ. ಒಂದು ರೀತಿಯಲ್ಲಿ ಅದೃಷ್ಟದ ವಾರ್ಡ್. ಇನ್ನೂ ನಾಗಪುರ ವಾರ್ಡ್ ನೆನಪಾಗೋದು ಇಸ್ಕಾನ್ ಟೆಂಪಲ್, ನಾರಾಯಣ ನೇತ್ರಾಲಯ, ಮೋದಿ ಕಣ್ಣಿನ ಆಸ್ಪತ್ರೆ, ಅಷ್ಟೇ ಅಲ್ಲದೆ ನಾಗ್ಪುರ ವಾರ್ಡ್ ಬಿಬಿಎಂಪಿ ಹಾಗೂ ಸರ್ಕಾರಿ ಹಾಸ್ಪಿಟಲ್ ಹೊಂದಿರುವ ಒಂದೊಳ್ಳೆ ಆರೋಗ್ಯ ಕ್ಷೇತ್ರವಾಗಿದೆ.
ಇನ್ನೂ ಕ್ರೀಡಾ - ಮನರಂಜನಾ ಕ್ಷೇತ್ರದಲ್ಲಿ ಈ ವಾರ್ಡ್ ಎತ್ತಿದ ಕೈ. ರಾಷ್ಟ್ರೀಯ ಮಟ್ಟದ ಡಾ. ರಾಜಕುಮಾರ್ ಒಳಾಂಗಣ ಕ್ರೀಡಾಂಗಣ, ಅಟಲ್ ಬಿಹಾರಿ ವಾಜಪೇಯಿ ಗ್ರೌಂಡ್, ಸೇರಿದಂತೆ 3-4 ಆಟದ ಮೈದಾನಗಳಿವೆ.
ಇದರ ಜತೆಗೆ 18 ಪಾರ್ಕ್ ಗಳನ್ನು ಹೊಂದಿದ್ದು ನಗರಕ್ಕೆ ಹೆಚ್ಚು ಆಕ್ಸಿಜನ್ ನೀಡುವ ವಾರ್ಡ್ ಪರಿವರ್ತನೆ ಆಗಿದೆ. ಮಕ್ಕಳ ಅಷ್ಟೇ ಅಲ್ಲದೇ ವಯಸ್ಕರಿಗೂ ಕ್ರೀಡಾ ಮನರಂಜನಾ ಸಾಮಗ್ರಿ ಪಾರ್ಕ್‌ನಲ್ಲಿ ಕಾಣಬಹುದು. ಇದಕ್ಕೆ ಉದಾಹರಣೆ ಎಂಬಂತೆ ಶಂಕರ್ ಮಠ ಸಮೀಪದ ಸ್ವಾಮೀ ವಿವೇಕಾನಂದ ಪಾರ್ಕ್, ಸಿದ್ದಯ್ಯ ಪಾರ್ಕ್, ಕಲಾ ಕೇಸರಿ ಉದಯ ಕುಮಾರ್ ಪಾರ್ಕ್, ಸಿದ್ಧಾರೂಢ ಉದ್ಯಾನವನ ನಿರ್ಮಾಣವಾಗಿದೆ.
ಈ ವಾರ್ಡ್ 36 ಸಾವಿರ ಜನ ಸಂಖ್ಯೆ ಇದೆ. ಹೆಚ್ಚಾ ಮೂಲ ವಾಸಿಗರು ಇರುವ ನಾಗಪುರ ವಾರ್ಡ್ ನ ವಿಸ್ತೀರ್ಣ 2. ಕಿ.ಮೀ. ಬ್ರಾಹ್ಮಣ, ಲಿಂಗಾಯತ ಸಮಾಜದವರೇ ಹೆಚ್ಚು ಮತದಾರರನ್ನು ಹೊಂದಿದೆ. ಅದರೆ ಕೆಲವೊಂದು ಕಾಮಾಗಾರಿ ರಾಜಕೀಯ ದೂರುದ್ದೇಶದಿಂದ ನಿಂತಿದೆ ಅಂತಾರೆ ಮಾಜಿ ಉಪ ಮಹಾಪೌರರು.
ಅದರೆ ರಸ್ತೆ ಗುಂಡಿ, ನೀರಿನ ಸಮಸ್ಯೆ, ಕಸ ವಿಲೇವಾರಿ ಕಿರಿಕಿರಿ, ಫುಟ್ಪಾತ್, ದಾರಿ ದೀಪ, ಕಳ್ಳತನ ಸಮಸ್ಯೆ ಮಾತ್ರ ಈ ವಾರ್ಡ್ ನಲ್ಲಿ ಇಲ್ಲ ಅಂತ ಕೆಲವರು ಹೇಳಿದ್ರೆ ಜನಪ್ರತಿನಿಧಿಗಳ ಅಸಮಾಧಾನವೂ ಇಲ್ಲಿ ಕೇಳಿ ಬಂದಿದೆ.
ಒಟ್ಟಾರೆ ನಾಗಪುರ ವಾರ್ಡ್ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರಕ್ಕೆ ಬರಲಿದ್ದು, ಅಬಕಾರಿ ಸಚಿವ ಗೋಪಾಲಯ್ಯ ಬಗ್ಗೆ ಹೆಚ್ಚಾಗಿ ಜನ ಮಾತಾಡ್ತಾರೆ. ಅವರ ಒಳ್ಳೆಯ ಕೆಲಸಗಳ ಬಗ್ಗೆ ಹಾಡಿ ಹೊಗಳುತ್ತಾರೆ. ಅನ್ಯ ವಾರ್ಡ್ ಹೋಲಿಕೆ ಮಾಡಿದ್ರೆ ಮಾದರಿ ವಾರ್ಡ್ ಅಂತಾನೇ ಕರೆಯಬಹುದು.
PublicNext
07/03/2022 07:13 pm