ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಐಡಿ ಕಾರ್ಡ್ ತೋರಿಸಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಈ ಅವಧಿಯನ್ನು ಡಿಸೆಂಬರ್ 15ರವರೆಗೂ ವಿಸ್ತರಿಸಲಾಗಿದೆ.
1 ರಿಂದ 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೋಮಾ, ವೃತ್ತಿಪರ, ಪದವಿ, ಸ್ನಾತಕೋತ್ತರ, ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು, ಸಂಜೆ ಕಾಲೇಜು ಹಾಗೂ ಪಿಹೆಚ್ ಡಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಶಾಲಾ , ಕಾಲೇಜಿನ ಶುಲ್ಕ ರಸೀದಿ ಅಥವಾ ಶಾಲಾ ಕಾಲೇಜಿನ ಗುರುತಿನ ಚೀಟಿಯೊಂದಿಗೆ ಡಿಸೆಂಬರ್ 15 ರವರೆಗೆ ಬಿಎಂಟಿಸಿ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗಿದೆ.
Kshetra Samachara
05/12/2021 10:11 pm