ದೊಡ್ಡಬಳ್ಳಾಪುರ: ನಾಲ್ಕು ಸಾವಿರ ಜನಸಂಖ್ಯೆ ಇರುವ ನಗರಸಭೆ ವಾರ್ಡ್, ವಾರ್ಡಿನ ಯಾವುದೇ ರಸ್ತೆಗೂ ಒಂದೇ ಒಂದು ಚರಂಡಿ ಇಲ್ಲ. ಬಚ್ಚಲು ಮನೆಯಿಂದ ಬರುವ ನೀರು ಚರಂಡಿ ಇಲ್ಲದೆ ಪಕ್ಕದ ಮನೆಯ ಅಂಗಳಕ್ಕೆ ಹರಿಯುತ್ತೆ, ಇದೇ ವಿಚಾರಕ್ಕೆ ನಿತ್ಯ ಗಲಾಟೆ ಜಗಳ ಹೊಡೆದಾಟ ಈ ವಾರ್ಡಿನಲ್ಲಿ ಸಾಮಾನ್ಯ ಆಗಿದೆ. ಇಂದು ಸಹ ಬಚ್ಟಲುಮನೆ ನೀರಿನ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮರಿ ನಡೆದಿದೆ.
ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯ ಸ್ಥಿತಿ ಇದು, ನಗರಸಭೆಯ ಕ್ರಮಸಂಖ್ಯೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಾಜೀವ್ ಗಾಂಧಿ ಬಡಾವಣೆಗೆ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿದೆ.
ವಾರ್ಡಿನಲ್ಲಿ ಸಾವಿರಕ್ಕೂ ಹೆಚ್ಚು ಮನೆ ಇದ್ದು, 4 ಸಾವಿರ ಜನಸಂಖ್ಯೆ ಇದೆ, ಬಡಾವಣೆ ನಿರ್ಮಾಣವಾಗಿ 18 ವರ್ಷವಾದರೂ ಇಲ್ಲಿಯವರೆಗೂ ಒಂದೇ ಒಂದು ಚರಂಡಿ ನಿರ್ಮಾಣವಾಗಿಲ್ಲ. ಇಂದು ಬಚ್ಚಲುಮನೆ ನೀರಿನ ವಿಚಾರಕ್ಕೆ ನಾಗಮ್ಮ ಮತ್ತು ರಾಮಚಂದ್ರಪ್ಪ ಕುಟುಂಬಗಳ ನಡುವೆ ಮಾರಾಮರಿ ನಡೆದಿದೆ. ರಾಮಚಂದ್ರಪ್ಪ ಕುಟುಂಬ ನಾಗಮ್ಮ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. ಮಾರಾಮಾರಿಯಲ್ಲಿ ನಾಗಮ್ಮನ ತಲೆಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಡೀ ನಗರಕ್ಕೆ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ ಆದರೆ ರಾಜೀವ್ ಗಾಂಧಿ ಬಡಾವಣೆಯಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡುವ ಜವಾಬ್ದಾರಿ ಇಲ್ಲಿನ ಯಾವ ಜನಪ್ರತಿನಿಧಿಗೂ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲದೆ ಇಡೀ ವಾರ್ಡ್ ಕೊಳಚೆ ಕೊಂಪೆಯಾಗಿದೆ, ಸೊಳ್ಳೆಗಳ ಕಾಟ ವಿಪರೀತವಾಗಿದೆ, ಸೂಕ್ತ ರಸ್ತೆಗಳು ಇಲ್ಲದೆ ಸಾಕಷ್ಟು ಜನರು ಬಿದ್ದು ಗಾಯಾಗೊಂಡಿದ್ದಾರೆ. ನರಕದ ಕೂಪದಿಂದ ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳನ್ನ ಕಾಪಾಡುವಂತೆ ಇಲ್ಲಿನ ಜನರು ಮನವಿ ಮಾಡಿದ್ದಾರೆ.
ಜನಪ್ರತಿನಿಧಿಗಳಿಗೆ ಬಡವರು ನಿರ್ಗತಿಕರು ಕೇವಲ ಓಟ್ ಬ್ಯಾಂಕ್ ಅಷ್ಟೇ, ಇಲ್ಲಿನ ಜನರು ಚರಂಡಿ. ರಸ್ತೆ ಮಾಡಿಸುವಂತೆ ಸಾಕಷ್ಟು ಭಾರಿ ಮನವಿ ಮಾಡಿದ್ದಾರೆ ಆದರೆ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ. ವಾರ್ಡಿಗೆ ಚರಂಡಿ ವ್ಯವಸ್ಥೆ ಕಲ್ಪಿಸುವಲ್ಲಿ ಸೋತು ಹೋಗಿರುವ ದೊಡ್ಡಬಳ್ಳಾಪುರ ನಗರಸಭೆ ನಿಜಕ್ಕೂ ಜನರ ಕಷ್ಟಕ್ಕೆ ಮಿಡಿಯುತ್ತಾ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
PublicNext
15/06/2022 08:56 pm