ಬೆಂಗಳೂರು: ಶ್ರೀ ಸಾಮಾನ್ಯರಿಗೆ ಮತ್ತೊಂದ ಶಾಕ್ ಎದುರಾಗಲಿದೆ. ಆಟೋ-ಓಲಾ-ಉಬರ್ ಕ್ಯಾಬ್ ಮೂಲಕ ಓಡಾಡೋ ಜನಕ್ಕೆ ಜನವರಿ-01 ರಿಂದಲೇ ದರ ಏರಿಕೆಯ ಬಿಸಿ ತಗುಲಲಿದೆ.
ಕೇಂದ್ರ ಸರ್ಕಾರ ಶೇಕಡ-05 ರಷ್ಟು ಜಿಎಸ್‌ಟಿಯನ್ನ ವಿಧಿಸಿದೆ. ಇದರ ಪರಿಣಾಮ ಓಲಾ-ಉಬರ್-ಆಟೋಗಳು ಮೇಲೂ ಬೀಳಲಿದೆ. ಅದಕ್ಕೇನೆ ಜನವರಿ-1 ರಿಂದಲೇ ಎಲ್ಲ ಓಲಾ-ಉಬರ್ ಅಥವಾ ಹೇಲಿಂಗ್ ಅಪ್ಲಿಕೇಶನ್‌ಗಳ ಮೂಲಕ ಬುಕ್ ಮಾಡುವ ಆಟೋ,ಓಲಾ-ಉಬರ್ ದರ ಏರಿಕೆ ಆಗಲಿದೆ.
ಹೇಲಿಂಗ್ ಅಪ್ಲಿಕೇಶನ್ ಹೊರಗೆ ಕಾರ್ಯನಿರ್ವಹಿಸುವ ಆಟೋ ರಿಕ್ಷಾಗಳು ಜಿಎಸ್‌ಟಿ ವ್ಯಾಪ್ತಿಗೆ ಬರೋದೇ ಇಲ್ಲ.ಆದರೆ,ಬೆಂಗಳೂರು ಸಾರಿಗೆ ಪ್ರಾಧಿಕಾರವು ನಗರದ ಆಟೋ ದರಗಳನ್ನ ಶೇಕಡ-15 ರಿಂದ 20 ರಷ್ಟು ಹೆಚ್ಚಿಸಿದೆ. ಈ ಎಲ್ಲ ಬೆಳವಣಿಗೆಯಿಂದ ಶ್ರೀಸಾಮಾನ್ಯನ ಮೇಲೆ ಅತಿ ಹೆಚ್ಚು ಹೊರೆ ಬೀಳೋದು.
Kshetra Samachara
10/12/2021 03:11 pm