ಬೆಂಗಳೂರು: ನೀವೇನಾದರೂ ಮನೆ ಕಟ್ಟೋದಕ್ಕೆ, ಬಿಸಿನೆಸ್ ಮಾಡೋದಿಕ್ಕೆ ಅಥವಾ ಸಣ್ಣ ಪ್ರಮಾಣದಲ್ಲಿ ಬಡ್ಡಿ ಸಿಗುತ್ತೆ ಎಂದುಕೊಂಡು ಬ್ಯಾಂಕ್‌ನಲ್ಲಿ ಏನಾದ್ರೂ ಸಾಲ ಮಾಡಿಕೊಂಡಿದ್ದರೆ ಮಿಸ್ ಮಾಡ್ದೆ ಈ ಸ್ಟೋರಿ ನೋಡಿ. ರೈತರೊಬ್ಬರು ಬ್ಯಾಂಕ್‌ನ ಚಕ್ರಬಡ್ಡಿಗೆ ಸಿಲುಕಿ ಪಡಬಾರದ ಕಷ್ಟ ಪಡ್ತಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ
ದೃಶ್ಯದಲ್ಲಿರುವ ಈ ವ್ಯಕ್ತಿಯ ಹೆಸರು ಆಮರೇಶ್ ರೆಡ್ಡಿ. ಸಣ್ಣ ರೈತರು ಸರ್ಜಾಪುರ ಗ್ರಾಮದ ಹಂದೇನಹಳ್ಳಿ ನಿವಾಸಿ. ಇನ್ನೂ ಈತ 2009ರಲ್ಲಿ ಮನೆ ಕಟ್ಟಲು ಸರ್ಜಾಪುರ ಬಳಿ ಇರುವ ಕೆನರಾ ಬ್ಯಾಂಕ್‌ನಲ್ಲಿ ಸುಮಾರು 16 ಲಕ್ಷ ರುಪಾಯಿ ಹಣವನ್ನು 8% ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಂಡಿದ್ದರಂತೆ. ಆದರೆ ಸಾಲ 16 ಲಕ್ಷಕ್ಕೆ ಈಗ 40ಲಕ್ಷ ಆಗಿದೆಯಂತೆ. ಇನ್ನು ಇಷ್ಟೆಲ್ಲಾ ಯಾಕೆ ಅಂತ ಬ್ಯಾಂಕ್ ಸಿಬ್ಬಂದಿಗೆ ರೈತ ಪ್ರಶ್ನೆ ಮಾಡಿದರೆ ಬ್ಯಾಂಕಿನವರು ಮಾತ್ರ ಆ ಬಡ್ಡಿ ಈ ಬಡ್ಡಿ ಅಂತ ಹೇಳಿ ರೈತನಿಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು 2009ರಲ್ಲಿ ಸುಮಾರು 16 ಲಕ್ಷಕ್ಕೆ 8 ಪರ್ಸೆಂಟ್ ಬಡ್ಡಿಯಂತೆ ಮತ್ತೆ ಸುಮಾರು 2031ರವರೆಗೆ ಕಾಲಾವಕಾಶ ಇತ್ತಂತೆ. ಆದರೆ ಎರಡು ವರ್ಷಗಳಿಂದ ಕೊರೊನಾ ಇದ್ದ ಕಾರಣಕ್ಕೆ ಹಣ ಪಾವತಿ ಮಾಡದೇ ಇದ್ದಿದ್ದರಿಂದ ಸುಮಾರು ಎರಡು ವರ್ಷಕ್ಕೆ ಒಂದೇ ದಿನ ೨ ಲಕ್ಷ ಕಟ್ಟಿದರಂತೆ ಇಲ್ಲಿ ತನಕ ಬರೋಬ್ಬರಿ 21 ಲಕ್ಷ ರೂಪಾಯಿ ಹಣ ಪಾವತಿ ಮಾಡಿದರೂ ಸಹ ಇನ್ನೂ 19 ಲಕ್ಷ ರೂಪಾಯಿ ಕಟ್ಟುವಂತೆ ಟಾರ್ಚರ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ರೈತ ಅಮರೇಶ್ ರೆಡ್ಡಿ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತೆ ಅಂತ ಆಸೆಯಿಂದ ಕಾಡಿಬೇಡಿ ಸಾಲ ಪಡೆದಿದ್ದಕ್ಕೆ ಈಗ ಸಾಲವನ್ನೂ ತೀರಿಸಲಾಗದೆ ಮನೆಯನ್ನೂ ಉಳಿಸಿಕೊಳ್ಳಲಾಗದೇ ಅತಂತ್ರ ಸ್ಥಿತಿ ಎದುರಾಗಿದೆ. ಇದು ಸಾಲ ಪಡೆದುಕೊಳ್ಳುವ ವ್ಯಕ್ತಿಗಳಿಗೆ ಎಚ್ಚರಿಕೆ ಗಂಟೆಯಾಗಬೇಕು...!! ಯಾವುದೇ ಸಾಲ ಮಾಡಿಕೊಳ್ಳುವ ಮುಂಚೆ ಯೋಚನೆ ಮಾಡಿ ಪಡೆದುಕೊಳ್ಳುವಂತೆ ಆಗಲಿ ಅನ್ನೋದೆ ನಮ್ಮ ಆಶಯ.
ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್, ಆನೇಕಲ್ ಬೆಂಗಳೂರು
Kshetra Samachara
24/05/2022 08:00 pm