ಬೆಂಗಳೂರು: ನಾಯಿಮರಿಗಳೆಂದರೆ ಮುದ್ದುಮುದ್ದಾಗಿ ಇರುವ ಪ್ರಾಣಿಗಳು. ಈ ಮುದ್ದಾದ ಪ್ರಾಣಿಗಳನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ನಾಯಿಗಳೆಂದರೆ ಮಾನವ ಸ್ನೇಹಿ ಅಂತಾರೆ. ಆದರೆ ಒಮ್ಮೊಮ್ಮೆ ಈ ಮಾನವ ಈ ಮುದ್ದಾದ ಪ್ರಾಣಿಗಳನ್ನು ಅನಾಥವಾಗಿ ಬಿಟ್ಟು ಬಿಡುತ್ತಾನೆ. ಅದರಲ್ಲೂ ಈ ಹಸುಗೂಸು ಮುದ್ದಾದ ನಾಯಿ ಮರಿಗಳನ್ನು ತನ್ನ ತಾಯಿಯಿಂದ ಅನಾಥ ಮಾಡಿ ನೀರು ಊಟ ಸಿಗದಂಥ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ.
ತಾಯಿಯ ಹಾಲು ಸಿಗದೆ ನೀರು ಕೂಡ ಸಿಗದೆ ಈ ಮುದ್ದಾದ ಮರಿಗಳು ಅರಣ್ಯ ಪ್ರದೇಶದಲ್ಲಿ ನರಕ ಅನುಭವಿಸುತ್ತಿತ್ತು. ಮಳೆಯಲ್ಲಿ ನೆನೆಯುತ್ತಾ ಜೀವವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದ ಮುದ್ದಾದ ನಾಯಿ ಮರಿಗಳನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ನವೀನ್ ಹಾಗೂ ತಂಡದವರು ರಕ್ಷಿಸಿದ್ದಾರೆ. ಹಾಗೂ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಈ ಮುದ್ದಾದ ನಾಯಿ ಮರಿಗಳನ್ನು ಕನಕಪುರ ರಸ್ತೆಯಲ್ಲಿ ಪ್ರವೀಣ್ ಎಂಬುವರು ನಡೆಸುತ್ತಿರುವ 'ವೀ ಸೇವ್ ಅನಿಮಲ್ಸ್' ಎಂಬ ಸಂಸ್ಥೆಗೆ ಕೊಂಡೊಯ್ದವು. ಇಲ್ಲಿ ಇದೇ ರೀತಿ ಹಲವಾರು ಮೂಕಪ್ರಾಣಿಗಳು ತಮ್ಮವರನ್ನು ಕಳೆದುಕೊಂಡು ಮತ್ತು ತಮ್ಮ ಮನೆಯಿಂದ ದೂರವಾಗಿ ಪ್ರವೀಣ್ ಅವರ ಬಳಿಯೇ ಆಶ್ರಯ ಪಡೆದಿದೆ.
ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
11/05/2022 01:34 pm