ಬೆಂಗಳೂರು: ಬೆಂಗಳೂರು ಈಶಾನ್ಯ ವಿಭಾಗದ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಗುಬ್ಬಿ ಕೆರೆಯಲ್ಲಿ ಈಜಲು ಹೋಗಿದ್ದ 5 ಮಂದಿ ಯುವಕರಲ್ಲಿ ಮೂವರು ನೀರುಪಾಲಾಗಿದ್ದಾರೆ!
ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ದೊಡ್ಡ ಗುಬ್ಬಿಕೆರೆಯಲ್ಲಿ ಈಜಾಡಲು ಸಾರಾಯಿಪಾಳ್ಯದಿಂದ ಐವರು ಯುವಕರು ನೀರಿಗಿಳಿದಿದ್ದರು. ಇವರಲ್ಲಿ ಇಮ್ರಾನ್ (19), ಮುಬಾರಕ್ (18), ಸಾಹಿಲ್(18) ಮುಳುಗಿ ನಾಪತ್ತೆಯಾಗಿದ್ದು, ಅಬ್ದುಲ್ ರೆಹಮಾನ್ ಬಿನ್ ಫೈಜುಲ್ಲಾ(18), ಶಾಹೀದ್ ಬಿನ್ ಮುಜಾಯಿದ್ (17) ಬಚಾವಾಗಿದ್ದಾರೆ.
ಕೊತ್ತನೂರು ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡಿದ್ದು, ಹುಡುಕಾಟ ಮುಂದುವರೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕೂಡ ಕಾರ್ಯಾಚರಣೆಯಲ್ಲಿದ್ದಾರೆ.
Kshetra Samachara
27/05/2022 12:25 pm