ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ಹೇಳೋರು ಕೇಳೋರು ಯಾರು ಇಲ್ಲ ಅಂತಾ ಕಾಣ್ತಿದೆ. ಯಾಕಂದ್ರೆ ಕಳೆದ ಮೂರು ತಿಂಗಳ ಹಿಂದಷ್ಟೇ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ, ಮಗುವಿನ ಪ್ರಾಣ ಹೋಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಅಂಥದ್ದೇ ಘಟನೆ ನಡೆದು ಮತ್ತೊಬ್ಬ ವ್ಯಕ್ತಿ ಸಾವು ಬದುಕಿನ ಮಧ್ಯೆ ಹೊರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಿಬಿಎಂಪಿ ಅಧಿಕಾರಿಗಳಿಗೆ ಆಟದ ಮೈದಾನ, ಪಾರ್ಕ್ ಗಳು ಅಂದ್ರೆ ಯಾಕಿಷ್ಟು ಅಸಡ್ಡೆ ಅಂತಾ ಗೊತ್ತಗ್ತಿಲ್ಲ. ಈ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕರ ಪ್ರಾಣ ಹೋಗ್ತಿವೆ ನೋಡಿ. ಯಾಕೆಂದರೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ವಾರ್ಡ್ ನಲ್ಲಿರುವ ತುಳಸಿ ಪಾರ್ಕ್‌ನಲ್ಲಿ ನಿರ್ಮಾಣವಾಗಿದ್ದ ಗೇಟ್ ತುಕ್ಕುಹಿಡಿದು ಬಿದ್ದಿದೆ. ಬಿದ್ದ ರಭಸಕ್ಕೆ ಅದೇ ಗೇಟ್ ಸೆಕ್ಯುರಿಟಿ ತಲೆಗೆ ತೀವ್ರ ಪೆಟ್ಟಾಗಿರುವುದರಿಂದ ಸೆಕ್ಯುರಿಟಿ ಪ್ರಭಾಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳ ಬೇಜಾವ್ದಾರಿ ಎನ್ನುತ್ತಿದ್ದಾರೆ.
ಕಳೆದ ಮೂರು ತಿಂಗಳ ಹಿಂದಷ್ಟೇ ಇದೇ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮಲ್ಲೇಶ್ವರಂ ಆಟದ ಮೈದಾನದ ಗೇಟ್ ಬಿದ್ದು ಮಗುವಿನ ಪ್ರಾಣ ಹೋಗಿತ್ತು. ಅದಕ್ಕೆ ಮುಖ್ಯ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳನ್ನ ಅಮಾನತು ಮಾಡಿ 5 ಲಕ್ಷ ಪರಿಹಾರ ನೀಡಿ ಕೈ ತೊಳೆದುಕೊಂಡಿದ್ರು. ನಂತರ ಆಯುಕ್ತರು ಮೀಟಿಂಗ್ ಮಾಡಿ ಎಚ್ಚರಿಕೆ ನೀಡಿದ್ರು. ಆದ್ರೂ ಕೂಡ ಎಚ್ಚೆತ್ತುಕೊಳ್ಳದ ಈ ದಪ್ಪ ಚರ್ಮದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೆಕ್ಯುರಿಟಿ ಗಾರ್ಡ್ ಪ್ರಭಾಕರ್ ಸಾವು ಬದುಕಿನ ಮಧ್ಯೆ ಹೊರಡುವಂತಾಗಿದೆ. ಇದಕ್ಕೆ ಪಾಲಿಕೆ ಅಧಿಕಾರಿಗಳನ್ನ ಕೇಳಿದ್ರೆ ನೋಡೋಣ ಚೆಕ್ ಮಾಡ್ತೀವಿ ಅಂತಾ ಉಡಾಫೆ ಉತ್ತರ ನೀಡ್ತಿದ್ದಾರೆ.
PublicNext
14/12/2024 11:34 am