ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊರೊನಾ 4 ನೇ ಅಲೆ ಹಿನ್ನೆಲೆ ರಕ್ತದಾನ ಶಿಬಿರ !

ಯಲಹಂಕ: ಇದೀಗ ಕೊರೊನಾ ನಾಲ್ಕನೆ ಅಲೆಯ ಭೀತಿ ವಿಶ್ವದೆಲ್ಲೆಡೆ ಜೋರಾಗುತ್ತಿದೆ. ಕೊರೊನಾ ಎರಡನೇ ಅಲೆ ವೇಳೆ ರಕ್ತಾಕ್ಕಾಗಿ ತೀವ್ರ ಹಾಹಾಕಾರ ಶುರುವಾಗಿತ್ತು. ಇದೀಗ ಮತ್ತೆ ರಕ್ತಕ್ಕಾಗಿ ಅಭಾವ ಉಂಟಾಗಬಾರದೆಂಬ ಮುಂಜಾಗ್ರತೆಯಿಂದ ಯಲಹಂಕದ ಕಣ್ವಮಠ ರಕ್ತದಾನ ಶಿಬಿರ ಏರ್ಪಡಿಸಿದೆ.

ಕಳೆ ಒಂದು ವಾರದಿಂದ ರಕ್ತದಾನ ಶಿಬಿರ ಏರ್ಪಡಿಸುವ ಸಿದ್ಧತಾಕಾರ್ಯ ನಡೆದಿತ್ತು. 250ಕ್ಕೂ ಹೆಚ್ಚುಜನ ನೋಂದಣಿ ಮಾಡಿಸಿಕೊಂಡು ರಕ್ತದಾನ ಮಾಡಲು ಮುಂದಾಗಿದ್ದಾರೆ. ಯಲಹಂಕ ರೈತರ ಸಂತೆ ಸಮೀಪದ ಕಣ್ವಮಠದ ಆವರಣದಲ್ಲಿ ಮಧ್ಯಾಹ್ನದ ವೇಳೆಗೆ 200 ಜನ ರಕ್ತದಾನ ಮಾಡಿದ್ದಾರೆ. ಇನ್ನೂ ನೂರುಕ್ಕು ಹೆಚ್ಚು ಜನ ರಕ್ತದಾನ ಮಾಡಲಿದ್ದಾರೆ. ಕೇವಲ ರಕ್ತದಾನ ಮಾತ್ರವಲ್ಲದೇ ಕೊರೊನಾ ಬಗ್ಗೆ ಜನ ಜಾಗೃತಿಯನ್ನು ಸಹ ಮೂಡಿಸಲಾಯಿತು.

ಯಲಹಂಕ ಕಣ್ವಮಠದ ಆಯೋಜನೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಹಾಗೂ ರೆಡ್ ಕ್ರಾಸ್ ಸಹಯೋಗದೊಂದಿಗೆ ಕೊರೊನಾ ರಕ್ತದಾನ ಶಿಬಿರವನ್ನು ಏರ್ಪಡಿಸಿಲಾಗಿದೆ. ರಕ್ತದಾನ‌ ಮಹಾದಾನ ಎಂದು ಆಯೋಜಕರು & ದಾನಿಗಳು ತಿಳಿಸಿದ್ದಾರೆ.

SureshBabu PublicNext Yalahanka.

Edited By : Manjunath H D
PublicNext

PublicNext

22/04/2022 05:57 pm

Cinque Terre

41.52 K

Cinque Terre

0

ಸಂಬಂಧಿತ ಸುದ್ದಿ