ಆನೇಕಲ್: ಇತ್ತೀಚಿಗೆ ಬದಲಾದ ಜೀವನ ಶೈಲಿ ಒತ್ತಡದ ಬದುಕು ಚಿಕ್ಕ ವಯಸ್ಸಿನಲ್ಲೇ ಕಾಯಿಲೆಗಳು ಈಗಿನ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದರ ನಿವಾರಣೆಗೆ ಆರೋಗ್ಯ ಶಿಬಿರ ಸಹಕಾರಿಯಾಗಲಿದೆ ಎಂದು ಆಕ್ಸ್‌ಫರ್ಡ್ ವೈದ್ಯ ದಿನೇಶ್ ತಿಳಿಸಿದ್ದಾರೆ.
ಸಮಂದುರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೊಂಪಲಘಟ್ಟ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಆಕ್ಸ್‌ಫರ್ಡ್ ವೈದ್ಯಕೀಯ ಸಂಸ್ಥೆ, SIEDS ಸಂಸ್ಥೆ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಈ ನಿಟ್ಟಿನಲ್ಲಿ ನುರಿತ ವೈದ್ಯರಿಂದ ಉಚಿತ ಆರೋಗ್ಯ ಶಿಬಿರದಲ್ಲಿ ಜನರಿಗೆ ವ್ಯಾಕ್ಸಿನೇಷನ್, ಕಣ್ಣಿನ ಚಿಕಿತ್ಸೆ, ಇಸಿಜಿ, ಹಲ್ಲು ಚಿಕಿತ್ಸೆ ಸೇರಿದಂತೆ ಸಾಕಷ್ಟು ಕಾಯಿಲೆಗಳಿಗೆ ಸೂಕ್ತ ಸ್ಥಳದಲ್ಲಿ ಚಿಕಿತ್ಸೆ ನೀಡಲಾಯಿತು.
ಇಲ್ಲಿನ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ರೈತರು ಒತ್ತಡದಿಂದ ಕೆಲಸಗಳನ್ನು ಮಾಡಲಾಗಿದ್ದು, ಆರೋಗ್ಯದ ಬಗ್ಗೆ ಚಿಕಿತ್ಸೆ ಪಡೆಯಲು ದೂರದ ಬೆಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಜನರ ಉಪಯೋಗಕ್ಕಾಗಿ ಮನೆ ಬಾಗಲಿಗೆ ತಲುಪುವ ನಿಟ್ಟಿನಲ್ಲಿ ಇಂದು ಉಚಿತ ತರಬೇತಿ ಶಿಬಿರವನ್ನು ಮಾಡಲಾಗಿತ್ತು. ಕಾಯಿಲೆ ಬರುವ ಮುನ್ನವೇ ಎಚ್ಚರವಹಿಸಿದರೆ ಕಷ್ಟಗಳಿಂದ ಪಾರಾಗಬಹುದು. ಇನ್ನು ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ವೈದ್ಯರು ಮುಖಂಡರು ಸಮಂದೂರು ಗ್ರಾಮ ಸದಸ್ಯರು ಭಾಗಿಯಾಗಿದ್ದರು.
Kshetra Samachara
27/02/2022 07:14 pm