ಬೆಂಗಳೂರು: ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ರೋಗಿಗಳ ನರಳಾಟವನ್ನು ನೋಡಿದರೆ ಕಣ್ಣಂಚಲ್ಲಿ ನೀರು ಜಿನುಗುತ್ತೆ. ಆ್ಯಂಬುಲೆನ್ಸ್‌ನಲ್ಲೇ ಗಂಟೆಗಟ್ಟಲೇ ರೋಗಿಗಳು ಕಾದು ಕುಳಿತರೂ, ಚಿಕಿತ್ಸೆ ಸಿಗದೆ ನರಳಿ ನರಳಿ ಪ್ರಾಣಬಿಟ್ಟರೂ ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ.
ಅಪಘಾತವಾಗಿ ಬರುವ ರೋಗಿಗಳಿಗೆ ಸಾವೊಂದೇ ದಾರಿ ಅನ್ನೊಹಂಗಾಗಿದೆ ನಿಮ್ಹಾನ್ಸ್ ಪರಿಸ್ಥಿತಿ. ಇಲ್ಲಿ ದಿನಗಟ್ಟಲೇ ಕಾದರೂ ಎಮರ್ಜೆನ್ಸಿ ವಾರ್ಡ್ ಫುಲ್, ಬೆಡ್ ಇಲ್ಲ ಅಂತ ಸೆಕ್ಯೂರಿಟಿಗಳೇ ಹೇಳಿ ಕಳುಸ್ತಾರೆ. ಕನಿಷ್ಠ ಡಾಕ್ಟರ್‌ಗಳು ಬಂದು ಚಿಕಿತ್ಸೆ ಕೂಡ ನೀಡಲ್ಲ. ರೋಗಿಯ ನರಳಾಟ ಕಂಡು ಸಂಬಂಧಿಕರು ಕಣ್ಣೀರು ಹಾಕಿದ್ರೂ ಇಲ್ಲಿ ಯಾವ ಬೆಲೆಯೂ ಸಿಗದ ಪರಿಸ್ಥಿತಿ ನಿಮ್ಹಾನ್ಸ್‌ನಲ್ಲಿದೆ.
ಕೆಲ ರೋಗಿಗಳು ಚಿಕಿತ್ಸೆಗಾಗಿ ಕಾದು ಕಾದು ಬೇರೆ ಆಸ್ಪತ್ರೆಗೂ ಹೋಗದೆ ಆ್ಯಂಬುಲೆನ್ಸ್ ನಲ್ಲೆ ಪ್ರಾಣ ಬಿಡುತ್ತಿದ್ದಾರೆ. ದೂರದೂರಿನ ಆಸ್ಪತ್ರೆಯಿಂದ ನಿಮ್ಹಾನ್ಸ್‌ಗೆ ರೆಫರ್ ಮಾಡ್ತಾರೆ. ಆದರೆ ಇಲ್ಲಿ ರೋಗಿಗಳಿಗೆ ಕೇಳುವವರೇ ಇಲ್ಲ. ಪೊಲೀಸರೇ ಅಪಘಾತವಾದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಲು ಬಂದರೂ ಇಲ್ಲಿ ಬೆಡ್ ಸಿಗಲ್ಲ. ಸಂಜೆ ಐದು ಗಂಟೆಗೆ ಆಕ್ಸಿಡೆಂಟ್ ಆಗಿದ್ದ ವ್ಯಕ್ತಿಗೆ ರಾತ್ರಿ ೧೨ ಗಂಟೆಯಾದರೂ ಬೆಡ್ ಸಿಗದೆ ನರಳಾಡಿದ್ದಾನೆ. ಇಂತಹ ಅವ್ಯವಸ್ಥೆಗೆ ಅಸಲಿ ಕಾರಣವನ್ನು ಸಂಬಂಧಪಟ್ಟ ಅಧಿಕಾರಿಗಳೇ ಹೇಳಬೇಕು.
PublicNext
02/02/2022 11:34 am