ಬೆಂಗಳೂರು: ನೈಟ್ ಕರ್ಫ್ಯೂ ಹಿನ್ನಲೆಯಲ್ಲಿ ಜನ ತಮ್ಮ ಊರುಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ ಪರಿಣಾಮ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ನಿನ್ನೆ ಶುಕ್ರವಾರ ಸಖತ್ ಟ್ರಾಫಿಕ್ ಜಾಮ್ ಆಗಿದೆ..ನಗರದ ಹೃದಯಭಾಗವಾದ ಕಾರ್ಪೋರೇಷನ್ ಸರ್ಕಲ್, ಟೌನ್ ಹಾಲ್, ಓಲ್ಡ್ ಮೆಡ್ರಾಸ್ ರಸ್ತೆ, ಮೈಸೂರು ರಸ್ತೆ , ಏರ್ಪೋರ್ಟ್ ಬಳ್ಳಾರಿ ರಸ್ತೆ, ತುಮಕೂರು ರಸ್ತೆ , ಕೆ.ಆರ್.ಮಾರುಕಟ್ಟೆ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು.. ನಗರದಿಂದ ಹೊರಗಡೆ ಹೋಗುವ ವಾಹನಗಳ ಸಂಖ್ಯೆಗಳ ಹೆಚ್ಚಳದಿಂದ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿತ್ತು. ಎರಡು ದಿನ ಸಂಪೂರ್ಣ ಬಂದ್ ಆಗಲಿರುವ ಕಾರಣ ತಮ್ತಮ್ಮ ಊರುಗಳತ್ತ ಜನ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡಿದ್ದಾರೆ.
ಬೈಕ್‌ಗಳು ಮತ್ತು ಕಾರುಗಳ ಓಡಾಟ ಸಂಜೆ ಆಗುತ್ತಿದ್ದಂತೆ ಹೆಚ್ಚಳವಾಗಿತ್ತು..ಕೆಲಸ ಮುಗಿಸಿ ಊರ ಕಡೆ ಮುಖ ಮಾಡ್ತಿರೋ ಜನ ಎಲ್ಲಾ ಕಡೆ ಕಂಡು ಬರುತ್ತಿದ್ದರು. ಇನ್ನು ಕೆಲವೆಡೆ ವೀಕ್ ಎಂಡ್ ಕರ್ಪ್ಯೂ ಹತ್ತಿರ ಆಗುತ್ತಿರುವ ಹಿನ್ನೆಲೆಯಲ್ಲಿ ಜನ ಮನೆ ಹಾದಿ ಹಿಡಿದಿದ್ರು. ಹೀಗಾಗಿ ನಗರದ ಬಹುತೇಕ ರಸ್ತೆಗಳಲ್ಲಿ ವಾಹನ ದಟ್ಟಣೆ ಎದ್ದುಕಾಣುತ್ತಿತ್ತು.
ಇನ್ನು ಯಲಹಂಕದಲ್ಲಿ ನೈಟ್ ಕರ್ಫ್ಯೂ ಜಾರಿಯಾದ ಹಿನ್ನಲೆ ಬೆಂಗಳೂರು ದೊಡ್ಡಬಳ್ಳಾಪುರ, ಗೌರಿಬಿದನೂರು, ದೇವನಹಳ್ಳಿ ಏರ್ಪೊರ್ಟ್ ರಸ್ತೆಗಳು ಬಿಕೋ ಎನ್ನುತ್ತಿದ್ದವು.. ಯಲಹಂಕದ ಜನ ರಾತ್ರಿ 8-30ರಿಂದ 9ಗಂಟೆಯೊಳಗೆ ತಮ್ಮ ಅಂಗಡಿಗಳಿಗೆ ಬೀಗ ಹಾಕಿ ತೆರಳಿದ್ದರು.. ಪರಿಣಾಮ ಯಲಹಂಕದ ಪ್ರಮುಖ ಮೂರು ರಸ್ತೆಗಳು ಬಂದ್ ಆಗಿದ್ದವು.
ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಟೈಟ್ ಆಗುತ್ತಿದ್ದಂತೆ, ಹೊರವಲಯದ ಎಲ್ಲಾ ಫ್ಲೈಓವರ್ಗಳ ಸಂಚಾರ ಬಂದ್ ಆಗಿದೆ..ಹಾಗೆಯೇ ಯಲಹಂಕದ ಏರ್ಪೋರ್ಟ್ ರಸ್ತೆಯಲ್ಲಿ ಬೆರಳೆಣಿಕೆ ವಾಹನ ಮಾತ್ರ ಸಂಚರಿಸುತ್ತಿದ್ದವು.
ಅಂತು ನೈಟ್ ಕರ್ಫ್ಯೂಗೆ ಬೆಂಗಳೂರು ಮತ್ತು ಯಲಹಂಕದಲ್ಲಿ ಜನರಿಂದ ಉತ್ತಮ ರೆಸ್ಪಾನ್ಸ್ ಕಂಡುಬಂದಿದೆ.
Kshetra Samachara
08/01/2022 09:15 am