ನೆಲಮಂಗಲ: ಕೊರೊನಾ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಜಾರಿಗೆ ತಂದ ವೀಕೆಂಡ್ ಕರ್ಫ್ಯೂಗೆ ನೆಲಮಂಗಲದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನೆಲಮಂಗಲ ನಗರದಲ್ಲಿ ಮೆಡಿಕಲ್ಸ್, ಆಸ್ಪತ್ರೆ ಹೊರತುಪಡಿಸಿ ಬಾರ್, ಅಂಗಡಿಮುಂಗಟ್ಟುಗಳು, ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ. ಇನ್ನು ಊರುಗಳಿಗೆ ತೆರಳಲು ಮುಂಗಡ ಬುಕ್ಕಿಂಗ್ ಮಾಡಿದ ಬಸ್‌ಗಳು ನೆಲಮಂಗಲದ ಕುಣಿಗಲ್ ರಸ್ತೆ ಜಂಕ್ಷನ್‌ಗೆ ಬರಲು ವಿಳಂಬ ಮಾಡುತ್ತಿವೆ. ಇದರಿಂದಾಗಿ ಲಗೇಜ್ ಸಹಿತ ಊರಿಗೆ ತೆರಳುತ್ತಿರುವ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತ ನಗರ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
Kshetra Samachara
07/01/2022 11:10 pm