ನೆಲಮಂಗಲ: ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗಲಿ ಅಂತ ರಾಗಿ ಖರೀದಿ ಕೇಂದ್ರ ಓಪನ್ ಮಾಡಲಾಗಿದೆ. ದೇವ್ರು ವರ ಕೊ ಟ್ಟರು ಪೂಜಾರಿ ಕೊಡ್ಲಿಲ್ಲ ಎಂಬಂತೆ ಕೇಂದ್ರಗಳು ಸ್ಥಾಪನೆ ಆಗಿದ್ರು ಅಲ್ಲಿನ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ರೈತರು ಹೈರಾಣಾಗಿ ಹೋಗಿದ್ದಾರೆ.
ಹೌದು ರಾಜ್ಯದಲ್ಲಿ ರಾಗಿ ಖರೀದಿ ಕೇಂದ್ರದ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತಿ ಕೇಂದ್ರಗಳಲ್ಲೂ ಒಂದಲ್ಲ ಒಂದು ಸಮಸ್ಯೆಯನ್ನ ರೈತರು ಅನುಭವಿಸುತ್ತಲೇ ಇದ್ದಾರೆ.
ಲಾರಿ ಬಂದಿಲ್ಲ, ಲಾರಿಗಾಗಿ ಕಾಯ್ತಿದ್ದೇವೆ, ಟ್ರಾಕ್ಟರ್ ಗಳಲ್ಲಿ ರಾಗಿ ತಂದಿದ್ದೇವೆ. ಮಳೆ ಬಂದ್ರೆ ಏನು ಮಾಡೋದು ಎಂದು ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.
ನಗರದ ಹೊರ ಹೊಲಯದ ರಾಗಿ ಖರೀದಿ ಕೇಂದ್ರದಲ್ಲು ಇದೆ ಸಮಸ್ಯೆಯಾಗಿದೆ. ಇದಲ್ಲವುದಕ್ಕೂ ಮುಕ್ತಿ ಸಿಗೋದು ಯಾವಾಗಂದ್ರೆ ನೇರವಾಗಿ ರಾಜ್ಯ ಸರ್ಕಾರ ರಾಗಿ ಖರೀದಿಗೆ ಇಳಿದಾಗ ಅನ್ನಿಸುತ್ತೆ.
Kshetra Samachara
24/05/2022 01:06 pm