ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯರ ನಿರ್ಲಕ್ಷ್ಯಕ್ಕೆ 13 ವರ್ಷದ ಬಾಲಕ ಸಾವು

ಆನೇಕಲ್ : ವೈದ್ಯರ ನಿರ್ಲಕ್ಷ್ಯದಿಂದಾಗಿ 13 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬೆಂಗಳೂರು ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕೂಡ್ಲು ಗೇಟ್ ನ ಬಳಿ ನಡೆದಿದೆ. ಪಾವಗಡ ಮೂಲದ ಕುಮಾರ್ ಮತ್ತು ವರಲಕ್ಷ್ಮಿ ದಂಪತಿಯ ಪುತ್ರ 13 ವರ್ಷದ ವಿವರ್ಧನ್ ಮೃತ ದುರ್ದೈವಿ. ಕೆಲ ವರ್ಷಗಳಿಂದ ಪಾವಗಡದಿಂದ ಬೆಂಗಳೂರಿನ ಕೂಡ್ಲು ಗೇಟ್ ಗೆ ಬಂದು ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆ ವಾಸವಾಗಿದ್ದರು.

ಕಳೆದ ಎರಡು ದಿನಗಳ ಹಿಂದೆ ಮಗ ವಿವರ್ಧನ ಜ್ವರ ಕಾಣಿಸಿಕೊಂಡಿತ್ತು ಹೀಗಾಗಿ ಕೂಡ್ಲು ಗೇಟ್ ಬಳಿಯಿರುವ ಮಾತೃಶ್ರೀ ಆಸ್ಪತ್ರೆಗೆ ದಾಖಲು ಮಾಡಿದರು. ವೈದ್ಯರು ಚಿಕಿತ್ಸೆ ನೀಡಿ ಯಾವುದೇ ತೊಂದರೆ ಇಲ್ಲ ಎಂದು ಪೋಷಕರಿಗೆ ತಿಳಿಸಿದರು.

ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ವಿವರ್ಧನ ಮೃತಪಟ್ಟಿದ್ದಾನೆ. ಸದ್ಯ ಮಗನನ್ನು ಕಳೆದುಕೊಂಡ ಪೋಷಕರು ವೈದ್ಯರ

ನಿರ್ಲಕ್ಷ್ಯದಿಂದಾಗಿಯೇ ಮಗ ಮೃತಪಟ್ಟಿರುವುದಾಗಿ ಆರೋಪ ಮಾಡಿ ಆಸ್ಪತ್ರೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಬಂಡೆಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

19/01/2022 04:53 pm

Cinque Terre

19.73 K

Cinque Terre

2

ಸಂಬಂಧಿತ ಸುದ್ದಿ