ಬೆಂಗಳೂರು: ಚಾಮರಾಜಪೇಟೆಯ 9 ನೇ ಕ್ರಾಸ್ನ 4ನೇ ಮುಖ್ಯರಸ್ತೆಯಲ್ಲಿರುವ ಮನೆ ಇದು. ಪುಷ್ಪಾ-ನೇಮಚಂದ್ ದಂಪತಿ ಈ ಮನೆಯಲ್ಲಿ ವಾಸ ಮಾಡ್ತಿದ್ರು. ಅದರಂತೆ ಮನೆಯ ಓನರ್ ಗೀತಾ ಜೊತೆ ಅಗ್ರಿಮೆಂಟ್ ಕೂಡ ಮಾಡಿಕೊಳ್ಳಲಾಗಿತ್ತು. 5 ಲಕ್ಷ ಅಡ್ವಾನ್ಸ್, 50 ತಿಂಗಳ ಹಣವನ್ನ ಕೂಡ ಪೇ ಮಾಡಿದ್ರು. ಇದಾದ ಕೆಲ ದಿನದಲ್ಲಿಯೇ ಓನರ್ ಹೊಸ ತಗಾದೆ ತೆಗೆದಿದ್ದಾರೆಂದು ಬಾಡಿಗೆದಾರ ನೇಮಚಂದ್ ಗಂಭೀರ ಆರೋಪ ಮಾಡಿದ್ದಾರೆ.
ವಿಚಾರ ಏನಂದ್ರೆ ದಂಪತಿ ವಾಸ ಮಾಡ್ತಿದ್ದ ಬಿಲ್ಡಿಂಗ್ ನ ಮೊದಲ ಮಹಡಿಯನ್ನ ಮನೆಯ ಓನರ್ ಕಮರ್ಷಿಯಲ್ ಗಾಗಿ ಬಳಕೆ ಮಾಡ್ತಿದ್ರಂತೆ. ಆ ಬಿಲ್ಡಿಂಗ್ ನ ಕರೆಂಟ್ ಬಿಲ್ ನೀವೇ ಕಟ್ಬೇಕೆಂದು ಬಾಡಿಗೆದಾರರರಿಗೆ ಒತ್ತಡ ಹಾಕಿದ್ದಾರೆ. ಬಾಡಿಗೆದಾರರು ಒಪ್ಪದಿದ್ದಾಗ, ಬಾಡಿಗೆಗಾರರಿದ್ದ ಮನೆಯ ಕರೆಂಟ್ & ನೀರನ್ನ ಕಟ್ ಮಾಡಿದ್ದಾರೆ. ಇದರಿಂದ ಕರೆಂಟ್ ಇಲ್ಲದೇ ಕತ್ತಲಲ್ಲಿ ದಿನದೂಡಿದ್ದಾರೆ. ಕರೆಂಟ್ & ನೀರಿನ ವಿಚಾರ ಸರಿಪಡಿಸುವಂತೆ ಓನರ್ ಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅನ್ನೋ ವಿಚಾರ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ ಐ ಆರ್ ನಲ್ಲಿ ಉಲ್ಲೇಖವಾಗಿದೆ.
ಅಲ್ಲದೇ ಕರೆಂಟ್ & ನೀರಿನ ಸಮಸ್ಯೆ ಬಗೆಹರಿಯದ ಕಾರಣ, ಬಾಡಿಗೆದಾರರು ತಿಂಗಳ ರೆಂಟ್ ಕೊಡಲು ಹಿಂದೇಟು ಹಾಕಿದ್ದಾರೆ. ಇದರಿಂದ ಆಕ್ರೋಶಿತಗೊಂಡ ಮನೆಯ ಓನರ್, ಬಾಡಿಗೆದಾರರು ಹೊರಗಡೆ ಹೋದ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿ, ಕೀ ತಗೊಂಡೋದ ಪರಿಣಾಮ ಬಾಡಿಗೆದಾರರು ಉಟ್ಟ ಬಟ್ಟೆಯಲ್ಲಿಯೇ ಬೀದಿಗೆ ಬರುವಂತಾಗಿದೆ. ಘಟನೆ ಸಂಬಂಧ ಚಾಮರಾಜಪೇಟೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ನೊಂದವರಿಗೆ ನ್ಯಾಯ ಕೊಡಿಸಬೇಕಿದೆ....
PublicNext
09/12/2024 06:12 pm