ಬೆಂಗಳೂರು: ಕೊರೊನಾ ಕಡಿಮೆ ಆಗಿದೆ. ಇನ್ಯಾಕೆ ಮಾಸ್ಕ್.ಅಂತಲೋ ಏನೋ. ಜನ ಕೋವಿಡ್ ನಿಯಮ ಗಾಳಿಗೆ ತೂರುತ್ತಿದ್ದಾರೆ. ಇದರ ಪರಿಣಾಮ, ಮಾರ್ಷಲ್‌ಗಳು ಸಾರ್ವಜನಿಕರಿಂದ ಒಟ್ಟು ದಿನವೊಂದಕ್ಕೆ 2 ಲಕ್ಷ ರೂ .ದಂಡ ವಸೂಲಿ ಮಾಡ್ತಿದ್ದಾರೆ.
ಹೌದು. ಬಿಬಿಎಂಪಿ 8 ವಲಯಗಳಲ್ಲಿ ಜ.1 ರಿಂದ 20 ರ ದಿನಾಂಕದ ವರೆಗೆ ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ ಮಾಡಿದ 18,743 ಪ್ರಕರಣ ಪೈಕಿ 46,85,750 ರೂ ದಂಡ ಪಾವತಿಯಾಗಿದೆ. ಜ.21 ರಿಂದ ಫೆ.9 ರವರೆಗೆ 13,808 ಪ್ರಕರಣಗಳಲ್ಲಿ34, 52000 ರೂ ವಸೂಲಿ ಆಗಿದೆ.
ಒಟ್ಟು 41 ದಿನದಲ್ಲಿ ಬರೊಬ್ಬರಿ 81,37,750 ರೂ ಸಂಗ್ರಹವಾಗಿದೆ. ಇದರಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣ ಹೆಚ್ಚಾಗಿವೆ.
PublicNext
11/02/2022 12:31 pm