ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: 1ರಿಂದ 18ರ ಹರೆಯದ 47 ಮಕ್ಕಳಿಗೆ ಕೊರೊನಾ ಪಾಸಿಟಿವ್ !

ಯಲಹಂಕ: ಕೊರೊನಾ 3ನೇ ಅಲೆಗೆ ಬೆಂಗಳೂರು ಭೀತಿಗೊಳಗಾಗಿದೆ. ಅದರಲ್ಲೂ 1ರಿಂದ 18ರ ಹರೆಯದ 47 ಮಕ್ಕಳಿಗೆ ಕೊರೊನಾ ಬಾಧಿಸಿರುವ ಕಾರಣ ಪೋಷಕರು ಭಯಗೊಂಡಿದ್ದಾರೆ. ಯಲಹಂಕ ಬಿಬಿಎಂಪಿ ವಲಯದ 11 ವಾರ್ಡ್‌ ಗಳಲ್ಲಿ ಒಂದು ವಾರದಲ್ಲಿ 47 ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ!

ಅದೃಷ್ಷವಶಾತ್ ಎಲ್ಲ ಮಕ್ಕಳಲ್ಲೂ ಚೇತರಿಕೆ ಕಂಡುಬರುತ್ತಿದೆ. ನೆನ್ನೆ ಒಂದೇ ದಿನ ಯಲಹಂಕ ವಲಯದಲ್ಲಿ 700 ಕೇಸ್‌ ಗಳು ದಾಖಲಾಗಿದ್ದರೆ, ಇಂದು ಸಂಜೆ 5ರ ಒಳಗೆ 450 ಕೇಸ್‌ ದಾಖಲಾಗಿವೆ. ಕಳೆದ 14 ದಿನಗಳಲ್ಲಿ 2270 ಕೇಸ್‌ ದಾಖಲಾಗಿವೆ. ಅದರಲ್ಲಿ 1896 ಮಂದಿ ಹೋಂಐಸೊಲೇಷನ್ ನಲ್ಲಿ ಆರೋಗ್ಯವಾಗಿದ್ದಾರೆ.

71 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 14 ಮಂದಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡೀ ವಲಯದಲ್ಲಿ ಶೇ. 70 ವ್ಯಾಕ್ಸಿನೇಷನ್‌ ಆಗಿದೆ ಎಂದು ಯಲಹಂಕ ಬಿಬಿಎಂಪಿ ವಲಯ ನೋಡೆಲ್ ಅಧಿಕಾರಿ ಆರತಿ ಆನಂದ್ ʼಪಬ್ಲಿಕ್ ನೆಕ್ಸ್ಟ್ʼ ಗೆ ತಿಳಿಸಿದ್ದಾರೆ. ಅಧಿಕಾರಿಗಳ ಜೊತೆ ನೋಡೆಲ್ ಅಧಿಕಾರಿ ಆರತಿ ಸಮಾಲೋಚನೆ ನಡೆಸಿದರು. ಯಲಹಂಕ ತಹಶೀಲ್ದಾರ್ ನರಸಿಂಹಮೂರ್ತಿ, ವಿಶೇಷ ತಹಶೀಲ್ದಾರ್ ಮಂಜುನಾಥ್, ಯಲಹಂಕ ಬಿಬಿಎಂಪಿ ಆಯುಕ್ತೆ ಪೂರ್ಣಿಮಾ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

11/01/2022 07:26 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ