ಯಲಹಂಕ: ಕಳೆದ ವಾರದ ಆರಂಭದಲ್ಲಿ ದಿನಕ್ಕೆ 10-15ರಂತೆ ಏರಿಕೆ ಆಗ್ತಿದ್ದ ಕೊರೊನಾ ಕೇಸ್ ಗಳು ಈಗ ವೀಕೆಂಡ್ ಕೊನೆಯಲ್ಲಿ ದ್ವಿಗುಣಗೊಂಡು ಆತಂಕ ಸೃಷ್ಟಿಸಿವೆ. ಕೋವಿಡ್ ಕಮಾಂಡೋ ಸೆಂಟರ್ ನ ಮಾಹಿತಿಯಂತೆ ಇಂದು ಯಲಹಂಕ ಬಿಬಿಎಂಪಿ ವಲಯದ 11 ವಾರ್ಡ್ ಗಳಲ್ಲಿ 556 ಕೇಸ್ ಗಳು ದಾಖಲಾಗಿದೆ.
ಯಲಹಂಕ ವಿಧಾನಸಭೆ ಕ್ಷೇತ್ರದ 4 ವಾರ್ಡ್ ಗಳಲ್ಲಿ 219 ಕೇಸ್ ಗಳು ದಾಖಲಾದರೆ, ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ 7 ವಾರ್ಡ್ ಗಳಲ್ಲಿ 337 ಕೇಸ್ ಗಳು ವರದಿಯಾಗಿದ್ದು, ಒಟ್ಟು 556 ಪ್ರಕರಣ ದಾಖಲಾಗಿವೆ. ಸದ್ಯ ಯಲಹಂಕ ವಲಯದಲ್ಲಿ 21 ಒಮಿಕ್ರಾನ್ ಕೇಸ್ ಗಳು ವರದಿಯಾಗಿದ್ದು, ಅವರಲ್ಲಿ ಮೂವರು ಗುಣಮುಖರಾಗಿದ್ದಾರೆ.
ಇನ್ನುಳಿದಂತೆ 18 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಒಮಿಕ್ರಾನ್ ಆಗಲೀ, ಕೊರೊನಾದಿಂದಾಗಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಯಲಹಂಕ ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ Public Next ಗೆ ಮಾಹಿತಿ ನೀಡಿದ್ದಾರೆ.
ಜನ ಸ್ವಯಂ ಜಾಗರೂಕರಾಗಿದ್ದು, ಮನೆಯೊಳಗೇ ಇದ್ದು ಕೊರೊನಾ ನಿಯಾಮಾವಳಿ ಪಾಲಿಸುತ್ತಾ ಬಿಬಿಎಂಪಿ ಮಾರ್ಗಸೂಚಿಯನ್ನೂ ಅನುಸರಿಸಬೇಕು. ಯಾವುದೇ ಮಾಹಿತಿಗೆ ಬಿಬಿಎಂಪಿ ಹೆಲ್ಪ್ ಲೈನ್ ಗೆ ಕರೆ ಮಾಡಬಹುದು ಎಂದು ಬಿಬಿಎಂಪಿ ಕೋರಿದೆ.
Kshetra Samachara
09/01/2022 05:33 pm