ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆ.ಆರ್.ಪುರ: "ಕೊರೊನಾ ನಿಯಮಾವಳಿ ನಿರ್ಲಕ್ಷಿಸಿದರೆ ಮತ್ತೆ ಲಾಕ್‌ ಡೌನ್‌ ಹಾವಳಿ"; ಪೊಲೀಸ್‌ ಜಾಗೃತಿ

ಕೆ.ಆರ್.‌ ಪುರ: ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್. ಪುರ ಪೊಲೀಸ್ ಠಾಣೆಯ ಸಿಬ್ಬಂದಿ ಕೆ.ಆರ್. ಪುರದ ಭಟ್ಟರಹಳ್ಳಿಯಲ್ಲಿ‌ ಸಾರ್ವಜನಿಕರಿಗೆ ಕೊರೊನಾ ಮೂರನೇ ಅಲೆ ಕುರಿತು ಜಾಗೃತಿ ಮೂಡಿಸಿದರು.

ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರಬಾರದಂತೆ‌ ಸೂಚಿಸಿದ ಪೊಲೀಸರು, ಜನರು ಅನಗತ್ಯವಾಗಿ ಹೊರಬಂದು ಬೇಕಾಬಿಟ್ಟಿಯಾಗಿ ತಿರುಗಾಡುವುದರಿಂದ ಮತ್ತೆ ಲಾಕ್ ಡೌನ್ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಬುದ್ಧಿವಾದ ಹೇಳಿ, ಮನವರಿಕೆ ಮಾಡಿದರು. ಜತೆಗೆ ಕೊರೊನಾ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಿದರು. ಪೊಲೀಸರ ಈ ಕೈಂಕರ್ಯಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ, ಮೆಚ್ಚುಗೆ ವ್ಯಕ್ತವಾಯಿತು.

Edited By : Nagesh Gaonkar
Kshetra Samachara

Kshetra Samachara

03/01/2022 07:18 pm

Cinque Terre

696

Cinque Terre

0

ಸಂಬಂಧಿತ ಸುದ್ದಿ