ಆನೇಕಲ್: ಗಡಿಭಾಗವಾದ ಆನೇಕಲ್ ನಲ್ಲಿ ಇತ್ತೀಚಿಗೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ ಕೆಲ ದಿನಗಳಿಂದ ಆನೇಕಲ್ ನ ತಾಲ್ಲೂಕಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿವೆ.
ಒಟ್ಟು ಇಂದಿಗೆ 137 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ನೆನ್ನೆ ಕೇವಲ ಒಂದೇ ದಿನದಲ್ಲಿ 39 ಪ್ರಕರಣಗಳು ದಾಖಲಾಗಿದೆ. 113 ಮಂದಿಯನ್ನು ಮನೆಯಲ್ಲಿಯೇ ಕ್ವಾರೆಂಟೈನ್ ಮಾಡಲಾಗಿದ್ದು ಉಳಿದವರನ್ನು ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಇನ್ನು ಆನೇಕಲ್ ಗಡಿ ಭಾಗವಾಗಿದ್ದು ಅಧಿಕಾರಿಗಳು ಅತ್ತಿಬೆಲೆ ಚೆಕ್ಪೋಸ್ಟ್ ಸೋಲೂರು ಚೆಕ್ಪೋಸ್ಟ್ ಗಳಲ್ಲಿ ಹೆಚ್ಚಿನ ನಿಗಾ ವಹಿಸಿದ್ದಾರೆ.
ಅಲ್ಲದೆ ಕೇವಲ ಒಂದು ವಾರದಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿದೆ. ಇನ್ನು ತಮಿಳುನಾಡಿನಿಂದ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.ಕಳೆದ ತಿಂಗಳಷ್ಟೆ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೂ ಸಹ ಕೊರೊನಾ ಸೋಂಕು ಪತ್ತೆಯಾಗಿತ್ತು.
Kshetra Samachara
02/01/2022 07:27 pm