ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜೈಲ್ಲಿ ಅವ್ಯವಹಾರ ತಡೆಗೆ ಟ್ರಾಫಿಕ್‌ ಪೊಲೀಸರ ಮಾದರಿಯಲ್ಲಿ ಜೈಲು ಸಿಬ್ಬಂದಿಗೂ ಬಾಡಿವೋರ್ನ್ ಕ್ಯಾಮರಾ!

ಬೆಂಗಳೂರು: ಅಕ್ರಮದ ಕೂಪ ಎನ್ನುವಂತೆ ಬಿಂಬಿತರಾಗಿರುವ ಜೈಲುಗಳಲ್ಲಿ ಪಾರದರ್ಶಕತೆ ತರಲು ರಾಜ್ಯ ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯು‌ ಮುಂದಾಗಿದೆ. ಬೆಂಗಳೂರು ನಗರ ಸಂಚಾರ ಪೊಲೀಸರ ಮಾದರಿಯಲ್ಲಿ ಜೈಲು ಸಿಬ್ಬಂದಿಗೂ ಬಾಡಿವೋರ್ನ್ ಕ್ಯಾಮರಾ ಒದಗಿಸಿದೆ.

ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನ ತಡೆಯಲು ಹಾಗೂ ಆಡಳಿತದಲ್ಲಿ ಸುಧಾರಣೆ ತರಲು‌ ಈಗಾಗಲೇ ರಾಜ್ಯದ ಎಂಟು‌ ಕೇಂದ್ರ ಕಾರಾಗೃಹಗಳು ಹಾಗೂ‌ ಒಂದು ಜಿಲ್ಲಾ ಕಾರಾಗೃಹದ ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮರ ನೀಡಲಾಗಿದೆ.

ಬೆಂಗಳೂರು‌ ಪರಪ್ಪನ ಅಗ್ರಹಾರ ಜೈಲಿಗೆ 20, ಮೈಸೂರು, ಶಿವಮೊಗ್ಗ, ವಿಜಯಪುರ, ಬೆಳಗಾವಿ, ಬಳ್ಳಾರಿ, ಕಲಬುರಗಿ, ಧಾರವಾಡ ಸೆಂಟ್ರಲ್ ಜೈಲುಗಳಿಗೆ ತಲಾ 10 ಕ್ಯಾಮರ ನೀಡಿದರೆ ಮಂಗಳೂರು ಜಿಲ್ಲಾ ಜೈಲಿಗೆ 5 ಸೇರಿ ಪ್ರಾಥಮಿಕ ಹಂತವಾಗಿ ಒಟ್ಟು 90 ಬಾಡಿವೋರ್ನ್ ಕ್ಯಾಮರಗಳನ್ನ ನೀಡಲಾಗಿದೆ.‌ ಇನ್ನೂ ಮುಂದಿನ ದಿನಗಳಲ್ಲಿ ಎಲ್ಲಾ ಸಿಬ್ಬಂದಿಗೂ ಬಾಡಿ ವೋರ್ನ್ ಕ್ಯಾಮರಾ ನೀಡಲು ಚಿಂತನೆ ನಡೆಸಲಾಗಿದೆ.

ಕೈದಿಗಳ ಮನೋಪರಿವರ್ತನ ಕೇಂದ್ರವಾಗಬೇಕಿದ್ದ ಜೈಲುಗಳು‌‌ ಪ್ರಸ್ತುತ ಪರಿಸ್ಥಿತಿಯಲ್ಲಿ ಅಕ್ರಮದ ತಾಣವಾಗಿದೆ. ಜೈಲಿಗೆ ಹೋಗುವ ಆರೋಪಿಗಳು ಜಾಮೀನಿನ‌ ಮೇರೆಗೆ ಹೊರಬಂದಾಗ ಇನ್ನಷ್ಟು ಅಪರಾದ ಎಸಗಲು ಸ್ಪೂರ್ತಿ ಕೇಂದ್ರಗಳಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಜೈಲಿನಲ್ಲಿ ಡ್ರಗ್ಸ್ ಸೇವನೆ, ಮೊಬೈಲ್ ಬಳಕೆ‌‌ ಇನ್ನಿತರ ಅನೈತಿಕ ಚಟುವಟಿಕೆಗಳು ಮಾಮೂಲಿಯಾಗಿವೆ.‌ ಪ್ರತಿಬಾರಿ ಜೈಲಿನ ಮೇಲೆ‌ ಪೊಲೀಸರು ದಾಳಿ ನಡೆಸಿದಾಗಲೂ ಅವ್ಯವಹಾರ ನಡೆಸುತ್ತಿರುವುದು ಬಗ್ಗೆ ಬಹಿರಂಗಗೊಂಡಿವೆ. ಸೆರೆಮನೆಯಲ್ಲಿ ಅಕ್ರಮ ವಾಸನೆ ಬಡಿದರೂ ಏನೂ ಗೊತ್ತಿಲ್ಲದವರಂತೆ ಜೈಲು ಸಿಬ್ಬಂದಿ ವರ್ತನೆ ಹಲವು ಅನುಮಾನಗಳಿಗೆ ಪುಷ್ಠಿ ಕೊಡುವಂತಿದೆ. ಇದೇ ಕಾರಣಕ್ಕೆ ಬಾಡಿ‌ ವೋರ್ನ್ ಕ್ಯಾಮರಗೆ ಹಿರಿಯ ಅಧಿಕಾರಿಗಳು ಮೊರೆ ಹೋಗಿದ್ದಾರೆ.

ಇದ್ರಿಂದ ಜೈಲು ಸಿಬ್ಬಂದಿ ಮತ್ತು ಕೈದಿಗಳ ಚಲನ ವಲನಗಳ ಕುರಿತು ನಿಗ ವಹಿಸಲು ಸಹಕಾರಿತಾಗಿದೆ. ಅಲ್ಲದೆ ಬಾಡಿ ವೋರ್ನ್ ಕ್ಯಾಮರಸಲ್ಲಿ ರೆಕಾರ್ಡ್ ಸೆರೆಯಾಗೂ ದೃಶ್ಯಾವಳಿಯನ್ನ ಮಾಸ್ಟರ್ ಕಂಟ್ರೋಲ್ ರೂಂ‌ನಲ್ಲಿ ವಿಕ್ಷಿಸುವ ವ್ಯವಸ್ಥೆ ಕೂ ಇದೆ.

ಇದ್ರ ಜೊತೆ ಜೈಲಿನಲ್ಲಿ ನೆಟ್ ವರ್ಕ್ ಸಿಗುವಂತಾಗಿದ್ದು, 2 ಜಿ ಬದಲಿಗೆ 5 ಜಿ ಮಾದರಿ ಜಾಮರ್ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.‌ ರಾಜ್ಯದ ಎಲ್ಲಾ ಜೈಲುಗಳಲ್ಲಿ 201 ಜಾಮರ್ ಗಳನ್ನು ಹಾಕಲು ಸರ್ಕಾರ ಒಪ್ಪಿಗೆ ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ 5 ಜಿ ಜಾಮರ್ ಗಳನ್ನು ಅಳವಡಿಸಲು ಅನುಮತಿ ದೊರೆತಿದ್ದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ ಸಂಬಂಧಪಟ್ಟ ಅಧಿಕಾರಿಗಳು ಸರ್ವೇ ಕಾರ್ಯ ಪೂರ್ಣಗೊಳಿಸಿದ್ದು ಜೈಲಿನ ಸುತ್ತಮುತ್ತ ನಿವಾಸಿಗಳಿಗೆ ತೊಂದರೆಯಾಗದಂತೆ ಅಧ್ಯಯನ ನಡೆಸಿದ್ದಾರೆ. ಇನ್ನೊಂದು ವರ್ಷದಲ್ಲಿ ಸೆಂಟ್ರಲ್ ಜೈಲಿನಲ್ಲಿ 5 ಜಿ ಮಾದರಿಯ ಐದು ಜಾಮರ್ ಗಳನ್ನ ಹಾಕಲು ತಯರಿ ನಡೆದಿದೆ.

Edited By :
Kshetra Samachara

Kshetra Samachara

17/07/2022 02:30 pm

Cinque Terre

3.18 K

Cinque Terre

0

ಸಂಬಂಧಿತ ಸುದ್ದಿ