ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯಕ್ಕೆ ಎಸ್.ನಿಜಲಿಂಗಪ್ಪನವರ ಕೊಡುಗೆ ಅಪಾರ: ವಿ. ಸೋಮಣ್ಣ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪನವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿ. ಸೋಮಣ್ಣ ಅವರು ಮಾಲಾರ್ಪಣೆ ಸಲ್ಲಿಸಿದರು.

ಇದೆ ವೇಳೆ ಮಾತನಾಡಿದ ಸಚಿವರು, ನಿಜಲಿಂಗಪ್ಪನವರ 22ನೇ ಪುಣ್ಯತಿಥಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ಅನುಪಸ್ಥಿತಿಯಲ್ಲಿ ಸರ್ಕಾರದ ವತಿಯಿಂದ ಮಾಡಿದ್ದೇವೆ. ಕರ್ನಾಟಕದಲ್ಲಿ ನೂರಾರು ಯೋಜನೆಗಳಿಗೆ ನಿಜಲಿಂಗಪ್ಪನವರು ಚಾಲನೆಯನ್ನು ನೀಡಿದ್ದರು. ಪ್ರಧಾನಿಯಾಗುವ ಅವಕಾಶ ಇದ್ದಾಗಲೂ ಅದನ್ನು ತೊರೆದು ಜನಸೇವೆ ಮಾಡಿದವರು. ಕರ್ನಾಟಕ ಮತ್ತು ಬೆಂಗಳೂರಿಗೆ ನಿಜಲಿಂಗಪ್ಪನವರ ಕೊಡುಗೆ ಅಪಾರ, ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು‌.

Edited By : PublicNext Desk
Kshetra Samachara

Kshetra Samachara

08/08/2022 07:57 pm

Cinque Terre

1.04 K

Cinque Terre

0

ಸಂಬಂಧಿತ ಸುದ್ದಿ