ಆಸ್ತಿ ತೆರಿಗೆ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಮಾಸ್ಟರ್ ಪ್ಲಾನ್ ಮಾಡಿದ್ದು,ಕೋಟಿ-ಕೋಟಿ ಸೋರಿಕೆ ಹಣ ಪಾಲಿಕೆ ಖಜಾನೆ ಸೇರುತ್ತಿದೆ.
ಹೌದು.ಕಂದಾಯ ವಿಭಾಗದಿಂದ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಒಂದು ಕಿ.ಮೀ ವ್ಯಾಪ್ತಿಯ 100 ಕಟ್ಟಡಗಳನ್ನು ಡ್ರೋನ್ ಸರ್ವೇ ನಡೆಸಲಾಗಿದ್ದು, ಈ ಪೈಕಿ ಸುಮಾರು ೩೦ ರಿಂದ ೩೫ ಕಟ್ಟಡಗಳು ಸುಳ್ಳು ಮಾಹಿತಿ ನೀಡಿರುವುದು ಪತ್ತೆಯಾಗಿದೆ. ಸ್ಥಳ ಪರಿಶೀಲನೆ ನಡೆಸಿ ನೋಟಿಸ್ ಜಾರಿಗೊಳಿಸಲು ಬಿಬಿಎಂಪಿ ತಯಾರಿ ಮಾಡಿಕೊಂಡಿದೆ.
ಪ್ರಾಯೋಗಿಕವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೆದ್ದಾಯ ಒಂದು ಕಿ.ಮೀ ಉದ್ದದ ರಸ್ತೆಯ 100 ಕಟ್ಟಡಗಳನ್ನು ಡ್ರೋನ್ ಮೂಲಕ ಸರ್ವೇ ನಡೆಸಿ ಕಟ್ಟಡದ ವಿಸ್ತೀರ್ಣ ಸೇರಿದಂತೆ ಮೊದಲಾದ ಮಾಹಿತಿ ಸಂಗ್ರಹಿಸಲಾಗಿದೆ. ಈ ಪೈಕಿ 30 ದಿಂದ 35 ಕಟ್ಟಡಗಳು ತಪ್ಪು ಮಾಹಿತಿ ನೀಡಿರುವುದು ಕಂಡು ಬಂದಿದೆ.
ಪಾಲಿಕೆ ಅಧಿಕಾರಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.ಜತೆಗೆ, ಕಟ್ಟಡಕ್ಕೆ ಹವಾನಿಯಂತ್ರಿತ (ಎಸಿ) ವ್ಯವಸ್ಥೆ ಹೊಂದಿದೆಯೋ ಅಥವಾ ಇಲ್ಲವೋ?, ವಸತಿ ಅಥವಾ ವಾಣಿಜ್ಯ ಕಟ್ಟಡವೋ ಸೇರಿದಂತೆ ಮೊದಲಾದ ಅಂಶಗಳನ್ನು ತಪಾಸಣೆ ನಡೆಸಿ ತಪ್ಪು ಮಾಹಿತಿ ನೀಡಿರುವುದು ದೃಢಪಟ್ಟರೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ.ಆರ್.ಎಲ್.ದೀಪಕ್ ಮಾಹಿತಿ ನೀಡಿದ್ದಾರೆ.
ಇನ್ನೂ ಬೆಸ್ಕಾಂ ನಿಂದ ವಿದ್ಯುತ್ ಸಂಪರ್ಕ ಪಡೆದ ವಂಚಿಸುತ್ತಿರುವ ಪ್ರಕರಣ ಪತ್ತೆಯಾಗಿದೆ. ಹೆಚ್ ಎಸ್ ಆರ್ ಬಡವಾಣೆಯಲ್ಲಿ 31 ಮಂದಿಯಿಂದ 1 ಕೋಟಿ ಹಾಗೂ ಜಕ್ಕಸಂದ್ರ ವಾರ್ಡ್ ನಲ್ಲಿ 15 ಮಾಲೀಕರು 27 ಲಕ್ಷ ರೂ.ವಂಚಿಸಿರೋದು ಬೆಳಕಿಗೆ ಬಂದಿದೆ.
ಗಣೇಶ್ ಹೆಗಡೆ ಪಬ್ಲಿಕ್ ನೆಕ್ಷ್ಟ್ ಬೆಂಗಳೂರು
Kshetra Samachara
17/06/2022 04:10 pm