ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಗೃಹ ಸಚಿವರ ಮನೆಗೆ ABVP ಮುತ್ತಿಗೆ;ಗುಪ್ತಚರ ಇಲಾಖೆ ವೈಫಲ್ಯ ಒಪ್ಪಿಕೊಂಡ ಕಮಿಷನರ್!

ಗೃಹ ಸಚಿವ ಅರಗ ಜ್ಙಾನೇಂದ್ರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಪರೋಕ್ಷವಾಗಿ ಗುಪ್ತಚರ ಇಲಾಖೆ ವೈಫಲ್ಯವನ್ನ ಕಮಿಷನರ್ ಒಪ್ಪಿಕೊಂಡಿದ್ದಾರೆ.

ಇಂತಹ ಘಟನೆ ಒಪ್ಪಿಕೊಳ್ಳುವಂತ ವಿಚಾರ ಅಲ್ಲ. ಈ ಬಗ್ಗೆ ಮೊದಲೇ ಮುನ್ಸೂಚನೆ ಅರಿತು ಕೊಳ್ಳಬೇಕಿತ್ತು. ಅದು ನಮ್ಮಿಂದ ಆಗಿಲ್ಲ.ನಮ್ಮ ಡಿಸಿಪಿ, ಹೆಚ್ಚುವರಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮಗೆ ಹತ್ತು ಗಂಟೆ ವಿಚಾರ ಗೊತ್ತಾಗಿದೆ. ಗೃಹ ಸಚಿವರಿಗೆ ಮನವಿ ಪತ್ರ ಕೊಟ್ಟು, ಮೌನ ಪ್ರತಿಭಟನೆ ಮಾಡ್ತಿವಿ ಅಂತ ಮಾಹಿತಿ ಇತ್ತು. ಸ್ಥಳದಲ್ಲಿ ರೆಸಿಡೆನ್ಸಿಷಿಯಲ್ ಗಾರ್ಡ್ ಮಾತ್ರ ಇದ್ರು. ಮೊದಲು ಮೌನವಾಗಿ ಪ್ರತಿಭಟನೆ ಮಾಡಿದ್ದಾರೆ.

ನಂತರ ಅಲ್ಲಿದ್ದ ಸಿಬ್ಬಂದಿ ಗೇಟ್ ಮುಚ್ಚಿದ್ದಾರೆ. ಈ ವೇಳೆ ಗೇಟ್ ತಳ್ಳಿಕೊಂಡು ಒಳ ನುಗ್ಗಲು ಪ್ರಯತ್ನಿಸಿದ್ದಾರೆ.ನಮ್ಮ ಪೊಲೀಸರು ಅವರನ್ನು ಹಿಡಿದುಕೊಂಡು ವಶಕ್ಕೆ ಪಡೆದಿದ್ದಾರೆ.ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ಕಮಿಷನರ್ ಪ್ರತಿಕ್ರಿಯಿಸಿದ್ದಾರೆ.

Edited By :
PublicNext

PublicNext

30/07/2022 01:24 pm

Cinque Terre

5.75 K

Cinque Terre

0

ಸಂಬಂಧಿತ ಸುದ್ದಿ