ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಓದು, ಆಸಕ್ತಿ ಕಡೆ ವಿದ್ಯಾರ್ಥಿಗಳು ಗಮನ ಕೊಟ್ರೆ ಯಶಸ್ಸು ಖಚಿತ: ಕಬಡ್ಡಿ ಕ್ರೀಡಾಪಟು ಮಮತಾ ಪೂಜಾರಿ ಸಲಹೆ

ಬೆಂಗಳೂರು: ಓದಿನ‌ ಜೊತೆಗೆ ಈಗಿನ ವಿದ್ಯಾರ್ಥಿಗಳು ಆಸಕ್ತಿ ಕ್ಷೇತ್ರದತ್ತ ಗಮನಕೊಟ್ರೆ ಯಶಸ್ಸು ಖಚಿತ ಎಂದು ಅರ್ಜುನ‌ ಪ್ರಶಸ್ತಿ ವಿಜೇತೆ, ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ಯಲಹಂಕದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಯಲಹಂಕದ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪ್ರತಿಭಾವಂತರನ್ನು ಸನ್ಮಾನಿಸಿ ಮಾತನಾಡಿದರು.

ರಜತ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಜನರನ್ನು ರಂಜಿಸಿದವು. ಭರತನಾಟ್ಯ, ಯಕ್ಷಗಾನ‌ ನೃತ್ಯ ಮತ್ತು ಮಹಿಳೆಯರು, ಮಕ್ಕಳ ತಾಳಮೇಳದ ನೃತ್ಯ ಅತ್ಯದ್ಭುತವಾಗಿದ್ದವು. ಇದೇ ವೇಳೆ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮಾತನಾಡಿ ಮಕ್ಕಳಿಗೆ ಶಾಲೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ, ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕೊಡಿ ಎಂದರು. ಇನ್ನು ದಕ್ಷಿಣ ಕನ್ನಡ ಸಂಘದವರು ಕರಾವಳಿ ಭಾಗದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರೂ ನೋಡಬೇಕೆಂದರು.

ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳ ವಿಕಾಸಕ್ಕೆ ಪ್ರೇರಣೆ ಆಗ್ತವೆ. ದಕ್ಷಿಣ ಕನ್ನಡಿಗರ ಸಂಘದ ರಜತಮಹೋತ್ಸವ ಕರಾವಳಿ ಭಾಗದ ತುಳು ಸಂಸ್ಕೃತಿಯ ಪ್ರತಿಬಿಂಬದಂತಾಗಿ ಎಲ್ಲರನ್ನೂ ರಂಜಿಸಿತು.

Edited By : Somashekar
Kshetra Samachara

Kshetra Samachara

12/06/2022 10:30 pm

Cinque Terre

5.32 K

Cinque Terre

0

ಸಂಬಂಧಿತ ಸುದ್ದಿ