ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮರಗೆಣಸಿನ ಪುಡಿಯಿಂದ ಪರಿಸರ ಸ್ನೇಹಿ ಗಣಪ!

ದೊಡ್ಡಬಳ್ಳಾಪುರ: ಗಣೇಶನ ಹಬ್ಬದ ಸಂಭ್ರಮಕ್ಕೆ ಇನ್ನೊಂದು ತಿಂಗಳು, ಈಗಾಗಲೇ ಗಣೇಶ ಮೂರ್ತಿಗಳ ತಯಾರಿಕೆ ಭರದಿಂದ ನಡೆಯುತ್ತಿದೆ. ಮರಗೆಣಸಿನ ಪುಡಿಯಿಂದ ಗಣೇಶನ ವಿಗ್ರಹಗಳನ್ನ ಮಾಡಲಾಗುತ್ತಿದೆ. ಪರಿಸರ ಸ್ನೇಹಿ ಮರಗೆಣಸಿನ ಪುಡಿಯಿಂದ ತಯಾರಿಸಿದ ಗಣಪ ನೀರಿನಲ್ಲಿ ಸಲುಪವಾಗಿ ಕರಗುತ್ತೆ ಮತ್ತು ಜಲಚರ ಜೀವಿಗಳಿಗೆ ಆಹಾರವಾಗುತ್ತೆ.

ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಹೊಸಹಳ್ಳಿಯ ಆದಿನಾರಾಯಣ್ ಮರಗೆಣಸು ಪುಡಿಯಿಂದ ವಿಶೇಷವಾದ ಗಣೇಶನ ವಿಗ್ರಹ ತಯಾರಿಸುತ್ತಿದ್ದಾರೆ. ಸ್ವಂತಹ ಕುಂಬಾರಿಕೆ ವೃತ್ತಿ ಮಾಡುವ ಆದಿನಾರಾಯಣ್ ಕಳೆದ 20 ವರ್ಷಗಳಿಂದ ಗಣೇಶ ಮೂರ್ತಿಗಳ ತಯಾರಿಕೆ ಮಾಡುತ್ತಿದ್ದಾರೆ. ಕೇರಳದಿಂದ ಬರುವ ಮರಗೆಣಸಿನ ಪುಡಿಯಿಂದ ಪುಡಿಯಿಂದ ಮೂರ್ತಿಗಳ ತಯಾರಿಕೆ ಮಾಡಲಾಗುವುದು. ಮೊದಲಿಗೆ ನೀರಿಗೆ ಪುಡಿಯನ್ನ ಹಾಕಿ ಪೇಸ್ಟ್ ರೀತಿಯಲ್ಲಿ ಬೇಯಿಸ ಬೇಕು. ಒಂದು ದಿನದ ನಂತರ ಮರಗೆಣಸಿನ ಪೇಸ್ಟ್ಅನ್ನು ಪೇಪರ್‌ಗೆ ಮೆತ್ತುವ ಮೂಲಕ ವಿಗ್ರಹದ ರೂಪ ಕೊಡಲಾಗುವುದು. ಚೆನ್ನಾಗಿ ಒಣಗಿದ ನಂತರ ಬಣ್ಣ ಬಳಿಯಲಾಗುವುದು. ಹೂವುಗಳಿಂದ ತಯಾರಿಸಲಾದ ನೈಸರ್ಗಿಕ ಬಣ್ಣಗಳನ್ನ ವಿಗ್ರಹ ಅಲಂಕಾರಕ್ಕೆ ಬಳಸಲಾಗುವುದು. ಒಂದು ವಿಗ್ರಹ ತಯಾರಿಸಲು ನಾಲ್ಕು ದಿನ ಬೇಕಾಗುತ್ತೆ. ಮರಗೆಣಸಿನ ಪುಡಿಯಿಂದ ತಯಾರಿಸಿದ ಗಣೇಶನ ಮೂರ್ತಿಗಳಿಗೆ ಸಾಮಾನ್ಯ ಮೂರ್ತಿಗಳಿಗಿಂತ ಬೆಲೆ ಹೆಚ್ಚಾಗಿಯೇ ಇರುತ್ತದೆ.

ಮರಗೆಣಸಿನ ಪುಡಿಯಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನ ನೀರಿಗೆ ವಿಸರ್ಜನೆ ಮಾಡಿದ್ದಾಗ, ಬಹಳ ವೇಗವಾಗಿ ನೀರಿನಲ್ಲಿ ಕರಗುತ್ತೆ. ನೀರಿನಲ್ಲಿ ಕರಗಿದ ಮರಗೆಣಸಿನ ಮೂರ್ತಿ ಜಲಚರ ಜೀವಿಗಳಿಗೂ ಆಹಾರವಾಗುತ್ತೆ. ಅಲಂಕಾರಕ್ಕೆ ಬಳಸಿದ ಬಣ್ಣಗಳು ಸಹ ನೈಸರ್ಗಿಕವಾದ ಬಣ್ಣಗಳಾಗಿದ್ದು ಯಾವುದೇ ರೀತಿಯ ಮಾಲಿನ್ಯಕ್ಕೆ ಕಾರಣವಾಗುವುದಿಲ್ಲ. ಆದಿನಾರಾಯಣ ಇಡೀ ಕುಟುಂಬ ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತೆ, ಆದಿನಾರಾಯಣ್ ವಿಗ್ರಹಗಳ ತಯಾರಿಕೆ ಮಾಡಿದ್ದಾರೆ. ವಿಗ್ರಹಗಳಿಗೆ ಬಣ್ಣ ಬಳಿಯುವ ಕೆಲಸ ಕುಟುಂಬದ ಹೆಂಗಸರಿಗೆ. ಜನವರಿಯಿಂದ ಪ್ರಾರಂಭವಾಗುವ ವಿಗ್ರಹ ತಯಾರಿಕೆ ಕೆಲಸ ಆಗಸ್ಟ್‌ವರೆಗೂ ಕೈ ತುಂಬ ಕೆಲಸ ಕೊಡುತ್ತೆ.

ಪಿಓಪಿ ಮತ್ತು ರಸಾಯನಿಕ ಬಣ್ಣಗಳ ಗಣೇಶನ ಮೂರ್ತಿಗಳನ್ನ ಕೆರೆ ಮತ್ತು ನದಿಗಳಿಗೆ ವಿಸರ್ಜನೆ ಮಾಡುವುದರಿಂದ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ. ಮತ್ತು ಜಲಚರ ಜೀವಿಗಳ ಪ್ರಾಣಕ್ಕೂ ಕುತ್ತು ತರುತ್ತಿವೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಯಿಂದ ಜಲಮಾಲಿನ್ಯಕ್ಕೆ ಕೊಂಚ ಬ್ರೇಕ್ ಬೀಳಲಿದೆ.

Edited By : Somashekar
PublicNext

PublicNext

31/07/2022 04:25 pm

Cinque Terre

35.19 K

Cinque Terre

0

ಸಂಬಂಧಿತ ಸುದ್ದಿ