ವರದಿ: ಶ್ರೀನಿವಾಸ್ ಚಂದ್ರ
ಬೆಂಗಳೂರು: ಕನ್ನಡಿಗರ ನೆಚ್ಚಿನ ಸೀರಿಯಲ್ ಆಗಿ ಹೆಸರು ಮಾಡಿದ್ದ ʼಕಮಲಿʼ ಸದ್ಯ ದೆಹಲಿಯಲ್ಲಿ ಪ್ರಧಾನಮಂತ್ರಿಗಳ ಅಂಗಳ ತಲುಪಿದೆ! ಪ್ರಧಾನಿ ಜೊತೆಗೆ ಮುಖ್ಯಮಂತ್ರಿ, ಗೃಹ ಮಂತ್ರಿಗೂ ʼಕಮಲಿ ಸೀರಿಯಲ್ ಗೋಲ್ ಮಾಲ್ ವಿಚಾರವಾಗಿ ದೂರು ನೀಡಲಾಗಿದೆ.
ಇಷ್ಟಕ್ಕೂ ದೂರು ನೀಡಿರೋದು ಬೇರಾರು ಅಲ್ಲ, ಸೀರಿಯಲ್ ನಿರ್ಮಾಣಕ್ಕೆ ಲಕ್ಷ ಲಕ್ಷ ಹಣ ಹಾಕಿದ್ದ ನಿರ್ಮಾಪಕ ರೋಹಿತ್. ಸೀರಿಯಲ್ ಶುರುವಾದಾಗ 73 ಲಕ್ಷ ಹಣ ಸುರಿದಿದ್ದ ರೋಹಿತ್ "ನನಗೆ ಜೀ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಹಾಗೂ ʼಕಮಲಿʼ ನಿರ್ದೇಶಕ ಅರವಿಂದ್ ಕೌಶಿಕ್ ವಂಚಿಸಿದ್ದಾರೆ" ಎಂದು ದೂರು ಕೊಟ್ಟಿದ್ದಾರೆ."ಕಮಲಿ 15 ಕೋಟಿ ರೂ.ನಷ್ಟು ವಹಿವಾಟು ಮಾಡಿದ್ರೂ, ನಾನು 1.5 ಕೋಟಿಯಷ್ಟು ಸಮಸ್ಯೆಯಲ್ಲಿದ್ದೇನೆ.ಎಲ್ಲವನ್ನೂ ವ್ಯವಸ್ಥಿತವಾಗಿ ವಂಚಿಸಿದ್ದಾರೆ" ಎಂದು ರೋಹಿತ್ ಆರೋಪಿಸಿದ್ದಾರೆ.
ಸದ್ಯ, ರೋಹಿತ್ ಕೊಟ್ಟ ದೂರನ್ನು ಕೂಲಂಕಷವಾಗಿ ಪರಿಗಣಿಸಿ, ವಿಚಾರಣೆ ನಡೆಸುವಂತೆ ಗೃಹಮಂತ್ರಿಗಳು ಕಮಿಷನರ್ ಕಮಲ್‌ಪಂತ್ ಗೆ ಸೂಚಿಸಿದ್ದಾರೆ. ಇನ್ನು, ಕಮಿಷನರ್ ಸೂಚಿಸುವ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯೋ ಸಾಧ್ಯತೆಯಿದ್ದು, ಯಾವುದೇ ಕ್ಷಣದಲ್ಲಿ ರಾಘವೇಂದ್ರ ಹುಣಸೂರು ಹಾಗೂ ಅರವಿಂದ್ ಕೌಶಿಕ್ ಗೆ ನೋಟಿಸ್ ಕೊಟ್ಟು, ವಿಚಾರಣೆಗೆ ಕರೆಯುವ ಸಂಭವವಿದೆ.
PublicNext
06/01/2022 12:23 pm