ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಡೈರೆಕ್ಟರ್ ಪ್ರೇಮ್ ನಿರ್ದೇಶನದ ಹೊಸ ಚಿತ್ರ ಮೈಸೂರಿನಲ್ಲಿ ಮುಹೂರ್ತ ಮುಗಿಸಿಕೊಂಡಿದೆ. ಡಾ: ರಾಜ್ ಕುಮಾರ್ ಜನ್ಮ ದಿನದಂದೇ ಈ ಚಿತ್ರಕ್ಕೆ ಚಾಲನೆ ಸಿಕ್ಕಿರೋದು ವಿಶೇಷ. ಈ ಕ್ಷಣದ ಒಂದಷ್ಟು ಡ್ರೋನ್ ವೀಡಿಯೋ PublicNextಗೆ ಲಭ್ಯವಾಗಿದೆ. ಬನ್ನಿ, ನೋಡೋಣ.
ಡೈರೆಕ್ಟರ್ ಜೋಗಿ ಪ್ರೇಮ್ ಇದೆ ಮೊದಲ ಬಾರಿಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಪರಿಕಲ್ಪನೆಯ ಈ ಚಿತ್ರದಲ್ಲಿ ಯುದ್ಧ ಕೂಡ ಇರೋ ಹಾಗೆ ಕಾಣುತ್ತಿದೆ. ಚಿತ್ರದ ಫಸ್ಟ್ ಲುಕ್‌ನಲ್ಲಿಯೇ ಈ ವಿಚಾರ ಈಗಾಗಲೇ ರಿವೀಲ್ ಆಗಿದೆ.
ಈ ವಿಶೇಷ ಚಿತ್ರಕ್ಕೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿಯೇ ಚಾಲನೆ ಸಿಕ್ಕಿದೆ. ಉತ್ಸವ ಮೂರ್ತಿ ಎಳೆಯೋ ಮೂಲಕ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಧ್ರುವ ಸರ್ಜಾ ಮತ್ತು ಡೈರೆಕ್ಟರ್ ಪ್ರೇಮ್ ಹಾಗೂ ನಿರ್ಮಾಪಕ ಒಟ್ಟಿಗೆ ತೇರು ಎಳೆದಿರೋದು ವಿಶೇಷ. ಉಳಿದಂತೆ ಇತರ ಅಪ್ ಡೇಟ್ಸ್‌ಗಾಗಿ ನೋಡ್ತಾಯಿರಿ ನಿಮ್ಮ PublicNext.
-ರೇವನ್ ಪಿ. ಜೇವೂರ್, ಎಂಟರಟೈನಮೆಂಟ್ ಬ್ಯೂರೋ, PublicNext
PublicNext
25/04/2022 04:32 pm