ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಉಕ್ರೇನಿನಲ್ಲಿ ಸಿಲುಕಿದ್ದ ಕನ್ನಡಿಗರು ರಾಜ್ಯಕ್ಕೆ ವಾಪಸ್ !

ಯಲಹಂಕ: ಯುದ್ದಪೀಡಿತ ಯುಕ್ರೇನ್ ನಿಂದ ಕರ್ನಾಟಕ ಮೂಲದ 9 ಜನ ವಿದ್ಯಾರ್ಥಿಗಳು ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ಆಗಮಿಸಿದರು. ಇವರು ಉಕ್ರೇನ್‌ನ ಜಪ್ರೋಷಿಯಾ ಸಿಟಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿಗಳು, ನಿನ್ನೆ ಬುಡಾಪೆಸ್ಟ್ ನಿಂದ ದೆಹಲಿಗೆ ಏರ್ಲಿಫ್ಟ್ ಮಾಡಲಾಗಿತ್ತು. ಇಂದು ದೆಹಲಿಯಿಂದ ವಿದ್ಯಾರ್ಥಿಗಳು ಏರ್ಪೊರ್ಟ್‌ಗೆ‌ ಬರುತ್ತಿದ್ದಂತೆ ಪೋಷಕರಲ್ಲಿ‌ ಸಂತಸ ಮನೆ ಮಾಡಿತ್ತು. ತಮ್ಮ‌ ಮಕ್ಕಳನ್ನ ಕಂಡು ಕುಟುಂಬಸ್ಥರು ತಬ್ಬಿ ಮುದ್ದಾಡಿದರು.

ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ತಾಯ್ನಾಡಿಗೆ ವಾಪಸ್ಸಾಗುತ್ತಿರುವುದು ಖುಷಿ ತಂದಿದೆ. ನಮ್ಮ ಕೇಂದ್ರ ಸರ್ಕಾರ ಮತ್ತು ಎಂಬೆಸಿ ಉತ್ತಮ ಕಾರ್ಯಾಚರಣೆ ಫಲವಾಗಿ ಭಾರತಕ್ಕೆ ಬಂದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

Edited By :
PublicNext

PublicNext

06/03/2022 02:51 pm

Cinque Terre

40.87 K

Cinque Terre

0

ಸಂಬಂಧಿತ ಸುದ್ದಿ