ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭಗವದ್ಗೀತೆ ಪುಸ್ತಕ ಹಾಗೂ ಕಲ್ಪವೃಕ್ಷ ವಿತರಣೆ

ಮಾಗಡಿ: ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರಿನ ಬೀದಿ ಬೀದಿಯಲ್ಲಿ ಕೇಸರಿ ಕಲರವ ಜೋರಾಗಿ ರಾರಾಜಿಸಿತು. ರಾಜಕೀಯದಲ್ಲಿ ತನ್ನದೇ ಆದ ವರ್ಚಸ್ಸು ಬೆಳೆಸಿಕೊಂಡಿರುವ ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಂಗಧಾಮಯ್ಯ ತನ್ನ ಕರ್ಮಭೂಮಿ ಕುದೂರಿನಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಕಾರ್ಯಕ್ರಮ ಆಯೋಜಸಿದ್ದರು. ಈ ಮೂಲಕ ಕುದೂರು ಹೋಬಳಿಯಲ್ಲಿ ಭಗವದ್ಗೀತೆ ಪುಸ್ತಕ ಹಾಗೂ ಕಲ್ಪವೃಕ್ಷ ವಿತರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಮಾಧ್ಯಮದವರೊಂದಿಗೆ ಮಾತನಾಡಿ ರಂಗಧಾಮಯ್ಯ ಒಬ್ಬ ರಾಜಕಾರಣಿಯಾಗಿ ಜೊತೆ ಜೊತೆಯಾಗಿ ಸಾಮಾಜಿಕ ಚಟುವಟಿಕೆ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ವಿಶೇಷವಾಗಿ ಆಷಾಢ ಮಾಸದ ಪವಿತ್ರ ಸಮಯದಲ್ಲಿ ಈ ಭಾಗದ ರೈತರಿಗೆ ಕಲ್ಪವೃಕ್ಷ ವಿತರಿಸಿದ್ದಾರೆ. ನಮ್ಮ ಸಾಂಸ್ಕೃತಿಕ ವೈಭವ ಹಾಗೂ ಧರ್ಮದ ಪ್ರತಿಬಿಂಬವಾಗಿರುವ ಭಗವದ್ಗೀತೆಯನ್ನು ವಿತರಣೆ ಮಾಡುವ ಮುಖಾಂತರ ನಿರಂತರ ಚಟುವಟಿಕೆಗೆ ಕಾರಣರಾಗಿದ್ದಾರೆ. ರಂಗಧಾಮಯ್ಯ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುತ್ತಿರುವ ರೈತಪರ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ರಂಗಧಾಮಯ್ಯ ನಿರಂತರ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಬೆಂಬಲ ನಿರಂತರವಾಗಿ ಅವರ ಜೊತೆ ಇದ್ದೇ ಇರುತ್ತೆ ಎಂದರು.

ಇನ್ನು ಈ ಕಾರ್ಯಕ್ರಮದಲ್ಲಿ ಹಲವಾರು ಸ್ವಾಮೀಜಿಗಳು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಭಾಗವಹಿಸಿದ್ದರು.

Edited By : Nagesh Gaonkar
PublicNext

PublicNext

25/07/2022 04:40 pm

Cinque Terre

22.43 K

Cinque Terre

0

ಸಂಬಂಧಿತ ಸುದ್ದಿ