ಬೆಂಗಳೂರು:ಆನೇಕಲ್ ತಾಲೂಕಿನ ಸೊಪ್ಪಹಳ್ಳಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಇನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದರ ಮೂಲಕ ಸಂದೇಶ ಸಾರಿದರು.ನಾಳೆ ಪರಿಸರ ದಿನಾಚರಣೆ ಅಂಗವಾಗಿ ಊರಿನ ಜನತೆಗೆ ಪರಿಸರ ಬಗ್ಗೆ ಜಾಗೃತಿ ಮೂಡಿಸಲಾಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆಗಳಾದ ಹೆಣ್ಣುಮಕ್ಕಳಿಗೆ ಶಿಕ್ಷಣ ,ಹಿಂದುಳಿದ ವರ್ಗದ ಪ್ರಗತಿ ,ಜಾತಿಪದ್ಧತಿ ಮೂಢನಂಬಿಕೆ ವಿರುದ್ಧ ಹೊಸ ನೀತಿಗಳ ಜಾರಿಗೆ ತಂದರು. ಅಲ್ಲದೆ ದಲಿತರಿಗೆ ವಿಶೇಷ ಶಾಲೆಗಳನ್ನು ಆರಂಭಿಸುವ ಮೂಲಕ ಹೊಸ ಚೈತನ್ಯವನ್ನ ತುಂಬಿದರು. ಒಡೆಯರ ಜಯಂತಿ ದಿನ ಅವರ ಸಾಧನೆಗಳನ್ನು ಸ್ಮರಣೆ ಮಾಡಲಾಯಿತು.
Kshetra Samachara
04/06/2022 10:37 pm