ಬೆಂಗಳೂರು : ವಿಭೂತಿಪುರ ಮಠದ ಪೀಠಾಧ್ಯಕ್ಷ ಶ್ರೀ ಮಹಾಂತಲಿಂಗ ಶಿವಾಚಾರ್ಯ ಕಾರ್ಯಕ್ರಮ ಉದ್ಘಾಟನೆ,
ಬೆಂಗಳೂರು : ಮಹದೇವಪುರ ವಲಯದ ಉತ್ತರ ಕರ್ನಾಟಕ ಜನತೆಯ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಯೋಗದೊಂದಿಗೆ ಕೆಆರ್ ಪುರದ ವಿಭೂತಿಪುರದಲ್ಲಿ ಉತ್ತರ ಕರ್ನಾಟಕ ರೊಟ್ಟಿ ಹಬ್ಬ ಸಂಭ್ರಮ- 2022 ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಭೂತಿಪುರ ಮಠದ ಪೀಠಾಧ್ಯಕ್ಷ ಶ್ರೀ ಮಹಾಂತಲಿಂಗ ಶಿವಾಚಾರ್ಯ ಹಾಗೂ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಶೈಲಿಯ ಜನಪದ ಹಾಡು, ಕಾಮಿಡಿ, ಮಿಮಿಕ್ರಿ ಸೇರಿದಂತೆ ಇನ್ನಿತರ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ನೂರಾರು ಜನ ಉತ್ತರ ಕರ್ನಾಟಕದ ಮಂದಿ ಭಾಗವಹಿಸಿ, ಉತ್ತರ ಕರ್ನಾಟಕ ಕಡಕ್ ರೊಟ್ಟಿ, ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಸವಿದು ಸಂಭ್ರಮಿಸಿದರು.
PublicNext
24/03/2022 10:39 pm