ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕ, ವಿದ್ಯಾರಣ್ಯಪುರ ಶ್ರೀ ಗಣೇಶೋತ್ಸವ ವೈಭವ; ವಿಸರ್ಜನೆ ಮೆರವಣಿಗೆ ಸಂಭ್ರಮ

ಬೆಂಗಳೂರು: ಯಲಹಂಕ ತಾಲೂಕಿನ ವಿದ್ಯಾರಣ್ಯಪುರ ಮತ್ತು ಯಲಹಂಕದಲ್ಲಿ ಶ್ರೀ ಗಣೇಶ ಮೂರ್ತಿಗಳ ಮೆರವಣಿಗೆ ಅತಿ ವಿಜೃಂಭಣೆಯಿಂದ ನಡೆಯಿತು. ವಿದ್ಯಾರಣ್ಯಪುರ ಮೈದಾನದಿಂದ 15ಕ್ಕೂ ಹೆಚ್ಚು ಬೃಹತ್ ಹಾಗೂ ಮಧ್ಯಮ ಗಾತ್ರದ ಮೂರ್ತಿಗಳು ಮೆರವಣಿಗೆಯಲ್ಲಿ ಯಲಹಂಕದತ್ತ ಸಾಗಿದವು.

ಇನ್ನು, ಯಲಹಂಕದ ಸಂಭ್ರಮ್ ಕಾಲೇಜ್ ಕಡೆಯಿಂದ ಹೊರಟ 30ಕ್ಕೂ ಹೆಚ್ಚು ಬೃಹತ್ ಮೂರ್ತಿಗಳು ಎಂ.ಎಸ್.ಪಾಳ್ಯ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ ಮಾರ್ಗವಾಗಿ ಮರೆವಣಿಗೆಯಲ್ಲಿ ಬಂದವು. ಯಲಹಂಕ ಶಾಸಕ ವಿಶ್ವನಾಥ್ ತಮಟೆ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.

ದೊಡ್ಡಬೆಟ್ಟಹಳ್ಳಿ ಹಾಗೂ ಚಿಕ್ಕಬೆಟ್ಟಹಳ್ಳಿಗಳಲ್ಲಿ ಹೆಚ್ಚು ಮುಸ್ಲಿಮರು ವಾಸವಿರುವುದರಿಂದ ಇದು ಸೂಕ್ಷ್ಮಪ್ರದೇಶ. ಆದರೆ,‌ ಹಿಂದೂ ಮತ್ತು ಮುಸ್ಲಿಮ್‌ ಬಾಂಧವರು ಒಟ್ಟಾಗಿ, ಒಗ್ಗಟ್ಟಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾಮೂಹಿಕ ಶ್ರೀ ಗಣೇಶ ವಿಸರ್ಜನೆಗೆ ಬೆಂಬಲ ನೀಡಿ, ಎರಡೂ ಧರ್ಮದವರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಡಿ.ಜೆ., ತಮಟೆ ಸದ್ದು, ವಾದ್ಯಗಳ ತಾಳಕ್ಕೆ ತಕ್ಕಂತೆ ಯಲಹಂಕ ಹಾಗೂ ವಿದ್ಯಾರಣ್ಯಪುರ ಸುತ್ತಮುತ್ತಲಿನ ಸಾವಿರಾರು ಯುವಜನರು ಕುಣಿದು ಕುಪ್ಪಳಿಸಿದರು.

-ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ

Edited By :
PublicNext

PublicNext

04/09/2022 06:48 pm

Cinque Terre

28.55 K

Cinque Terre

1

ಸಂಬಂಧಿತ ಸುದ್ದಿ