ನೆಲಮಂಗಲ: ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಲೂರು ಹೋಬಳಿಯ ಪಾಲನಹಳ್ಳಿ ಮಠದಲ್ಲಿ, ಜುಲೈ 24 ಭಾನುವಾರದಂದು ಮಧ್ಯಾಹ್ನ 12.00 ಗಂಟೆಗೆ ಸರಿಯಾಗಿ ಅಷಾಢ ಮಾಸದ ಚೌಡೇಶ್ವರಿ ದೇವಿಯ ಧೂಳು ಮೆರವಣಿಗೆ ಹಾಗೂ ಅದೇ ದಿನ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಕಲೆಗೆ ತವರೂರಾದ ಪಾಲನಹಳ್ಳಿ ಮಠದಲ್ಲಿ ಭಾನುವಾರ ಬೆಳಗ್ಗೆ 10.30 ಗಂಟೆಗೆ ಕೊಡಗೀಬೊಮ್ಮನಹಳ್ಳಿಯ ಶ್ರೀ ಜಗಜ್ಯೋತಿ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ನುರಿತ ಕಲಾವಿದರಿಂದ, ಹಾಗೂ ಬೆಳ್ಳಿ ಕೀರಿಟ ವಿಜೇತರಾದ ಸ್ನೇಹ ಜೀವಿ ಡಾ.ಟಿ.ಎಲ್. ರಮೇಶ್ ರವರ ದಕ್ಷ ನಿದೇರ್ಶನದಲ್ಲಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಅಭಿನಯಿಸುತ್ತಿದ್ದಾರೆ ಎಂದು ಪಾಲನಹಳ್ಳಿ ಮಠದ ಡಾ.ಶ್ರೀ ಸಿದ್ದರಾಜು ಸ್ವಾಮೀಜಿಗಳು ತಿಳಿಸಿದರು.
ಈ ಎಲ್ಲಾ ಕಾರ್ಯಕ್ರಮಕ್ಕೆ ಹಲವಾರು ಜನ ಪ್ರತಿನಿಧಿಗಳು, ಮಠಾಧೀಶರು, ಚಲನಚಿತ್ರ ನಟರು, ಉದ್ಯಮಿಗಳು, ಭಕ್ತರು, ರಂಗಭೂಮಿಕಲಾವಿದರು ಆಗಮಿಸಲಿದ್ದಾರೆ ಎಂದು ಮಾಧ್ಯಮಗೋಷ್ಟಿಯಲ್ಲಿ ಡಾ.ಶ್ರೀ ಸಿದ್ದರಾಜು ಸ್ವಾಮೀಜಿಯವರು ತಿಳಿಸಿದರು.
ಪೌರಾಣಿಕ ನಾಟಕದ ಜೊತೆಗೆ ಶ್ರೀ ಚೌಡೇಶ್ವರಿ ಅಮ್ಮನವರನ್ನು ಸ್ಮರಿಸಿ ಧಾರ್ಮಿಕ ಕಾರ್ಯಕ್ರಮಗಳಾದ, ಗಣಪತಿ ಹೋಮ, ಶಕ್ತಿ ಹೋಮ, ಮಹಿಳೆಯರಿಂದ ಕಳಶ ಸ್ವಾಗತ, ಪಂಚಾಮೃತ ಅಭಿಷೇಕ ಹಾಗೂ ಹೂವಿನ ಅಲಂಕಾರ ಕೈಗೊಳ್ಳಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಂಜೇಶ, ತಾ.ಪಂ.ಮಾಜಿ ಸದಸ್ಯ ನರಸಿಂಹಮೂರ್ತಿ, ಬೆಳಗುಂಬ ಸದಸ್ಯ ವಿಶ್ವನಾಥ್, ಮಂಜುನಾಥ್, ಪವನ್, ಕೊಡಗೀಬೊಮ್ಮನಹಳ್ಳಿ ರವಿ ಇನ್ನಿತರರಿದ್ದರು.
ಸುಮಿತ್ರ
ಪಬ್ಲಿಕ್ ನೆಕ್ಸ್ಟ್, ನೆಲಮಂಗಲ
Kshetra Samachara
22/07/2022 06:11 pm